ಭಾನುವಾರ, ಅಕ್ಟೋಬರ್ 2, 2022
18 °C
ಎಐಟಿಎ 16 ವರ್ಷದೊಳಗಿನವರ ಟೆನಿಸ್ ಟೂರ್ನಿ

ಎಐಟಿಎ 16 ವರ್ಷದೊಳಗಿನವರ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಸಾನ್ವಿ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಶ್ಚಿಮ ಬಂಗಾಳದ ತಮನ್ನಾ ಸಹಾ ಸವಾಲು ಮೀರಿದ ಕರ್ನಾಟಕದ ಸಾನ್ವಿ ಮಿಶ್ರಾ ಎಐಟಿಎ ಸೂಪರ್‌ ಸಿರೀಸ್‌ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು.

ಇಲ್ಲಿಯ ಕೆಎಸ್‌ಎಲ್‌ಟಿಎ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಮಂಗಳವಾರ ಸಾನ್ವಿ 6-3, 7-6 (6)ರಿಂದ ತಮನ್ನಾ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ವಿ. ಚಿಂಗಟಗೆರೆ ನವೀನ 7-5, 6-7 (7), 6-3ರಿಂದ ಮೂರನೇ ಶ್ರೇಯಾಂಕದ ಅರ್ಜಾನ್‌ ಕೊರಾಕಿವಾಲ ಅವರಿಗೆ ಸೋಲುಣಿಸಿದರು.

ಬಾಲಕಿಯರ ವಿಭಾಗದ ಇನ್ನುಳಿದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಹರ್ಷಿಣಿ 6-0, 6-2ರಿಂದ ಮೇಘನಾ ಜಿ.ಡಿ. ಎದುರು, ಅನ್ವಿ ಪುನಗಂಟಿ 6-1, 6-3ರಿಂದ ಶ್ರೇಯಾಂಶಿ ಘೆವಾರೆ ವಿರುದ್ಧ, ಸವಿತಾ ಭುವನೇಶ್ವರನ್‌ 6-0, 6-0ರಿಂದ ಗಮ್ಯಾ ಗುಪ್ತಾ ವಿರುದ್ಧ, ಇಂದುಶಾ ನಿಮಕಾಯಲ 7-6 (3), 4-1 ಕಸ್ತೂರಿ ವಿ.ಜಿ (ನಿವೃತ್ತಿ) ಎದುರು, ಲುಕ್ಷಿತಾ ಗೋಪಿನಾಥ್‌ 6-4, 6-0ರಿಂದ ಅವ್ವಾಯಿ ವಿವೇಕಾನಂದನ್‌ ಎದುರು ಜಯ ಗಳಿಸಿದರು. ದಿಶಾ ಖಂಡೋಜಿ 1–0ಯಿಂದ ಮುನ್ನಡೆಯಲ್ಲಿದ್ದಾಗ ಅವರ ಎದುರು ಸ್ಪರ್ಧಿಸಿದ್ದ ಅಹಿದಾ ಸಿಂಗ್ ನಿವೃತ್ತಿ ಪಡೆದರು.

ಬಾಲಕರ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಆರಾಧ್ಯ ಕ್ಷಿತಿಜ್‌ 6-1, 6-2ರಿಂದ ಕೌಶಿಕ್ ಅರುಣ್‌ಕುಮಾರ್ ಅವರನ್ನು ಮಣಿಸಿದರು. ಇನ್ನುಳಿದ ಹಣಾಹಣಿಗಳಲ್ಲಿ ರೂರಿಕ್ ರಜಿನಿ 6-3, 6-3ರಿಂದ ಪಿ. ಸರವಣಕುಮಾರ್ ಎದುರು, ಅನಂತ್ ಕೃಷ್ಣ 6-1, 6-1ರಿಂದ ಆದಿತ್ಯ ಅಯ್ಯಂಗಾರ್ ಎದುರು, ಕ್ರಿಸ್ಟೊ ಬಾಬು 3-6, 6-1, 6-1ರಿಂದ ಸುಹಾಸ್‌ ಸೋಮಾ ಎದುರು, ಯಶ್‌ ಪಂಚಾಕ್ಷರಿ 6-2, 6-3ರಿಂದ ಅಹಿಲ್ ಆಯಾಜ್ ವಿರುದ್ಧ, ಅನುರಾಗ್ ಶೌರ್ಯ ಕಳ್ಳಂಬೆಳ್ಳ 7-6 (5), 6-2ರಿಂದ ಗಂಧರ್ವ್ ಕೊಥಪಲ್ಲಿ ವಿರುದ್ಧ, ಪ್ರಕಾಶ್ ಸರಣ್‌ 6-4, 6-0ರಿಂದ ವಿಶಾಲ್ ರಾಮಿಸೆಟ್ಟಿ ಎದುರು, ಶ್ರೀನಿಕೇತನ್ ಕಣ್ಣನ್‌ 6-1, 6-1ರಿಂದ ದತ್ತಾತ್ರೇಯ ವಿ. ವಿರುದ್ಧ ಜಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು