ಸೋಮವಾರ, ಅಕ್ಟೋಬರ್ 3, 2022
21 °C

ರಫಾ ನಡಾಲ್‌ ಓಪನ್‌ ಟೆನಿಸ್‌ ಟೂರ್ನಿ: ಸಾಕೇತ್‌–ಯೂಕಿಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮಲೊರ್ಕಾ, ಸ್ಪೇನ್‌: ಭಾರತದ ಸಾಕೇತ್‌ ಮೈನೇನಿ ಮತ್ತು ಯೂಕಿ ಭಾಂಬ್ರಿ ಅವರು ಸ್ಪೇನ್‌ನಲ್ಲಿ ನಡೆದ ರಫಾ ನಡಾಲ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.

ಶನಿವಾರ ನಡೆದ ಫೈನಲ್‌ನಲ್ಲಿ ಸಾಕೇತ್‌– ಯೂಕಿ ಜೋಡಿ 6–2, 6–2 ರಲ್ಲಿ ಜೆಕ್ ರಿಪಬ್ಲಿಕ್‌ನ ಮರೆಕ್ ಜಿಂಜೆಲ್– ಲೂಕಾಸ್‌ ರೊಸೊಲ್‌ ವಿರುದ್ಧ ಜಯಿಸಿತು. ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಜೋಡಿ ಸ್ಪೇನ್‌ನ ಸೆರ್ಜಿಯೊ ಗಾರ್ನೆಸ್‌ ಮತ್ತು ಇಟಲಿಯ ಮಾರ್ಕೊ ಬೊರ್ಟೊಲೊಟಿ ಅವರನ್ನು ಮಣಿಸಿದ್ದರು.

ಸಾಕೇತ್‌–ಯೂಕಿ ಪ್ರಸಕ್ತ ಋತುವಿನಲ್ಲಿ ಜಯಿಸಿದ ಐದನೇ ಚಾಲೆಂಜರ್‌ ಟ್ರೋಫಿ ಇದಾಗಿದೆ. ಇವರು ವಿದೇಶದಲ್ಲಿ ನಡೆದ ಮೂರು ಚಾಂಪಿಯನ್‌ಷಿಪ್‌ಗಳಲ್ಲಿ ಗೆಲುವು ಸಾಧಿಸಿದ್ದರಲ್ಲದೆ, ಭೋಪಾಲ್‌ ಹಾಗೂ ನವದೆಹಲಿಯಲ್ಲಿ ನಡೆದ ಐಟಿಎಫ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು