ಶುಕ್ರವಾರ, ಜುಲೈ 30, 2021
23 °C

ಟೆನಿಸ್‌: ಸಾನಿಯಾ–ಬೆಥನಿ ಜೋಡಿಗೆ ಸೋಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಾನಿಯಾ ಮಿರ್ಜಾ–ಟ್ವಿಟರ್‌ ಚಿತ್ರ

ಈಸ್ಟ್‌ಬೋರ್ನ್‌, ಇಂಗ್ಲೆಂಡ್‌: ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಟೆಕ್‌ ಸ್ಯಾಂಡ್ಸ್‌ ಜೋಡಿ ಇಲ್ಲಿ ನಡೆಯುತ್ತಿರುವ ವಿಕಿಂಗ್‌ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಶ್ರೇಯಾಂಕ ರಹಿತ ಸಾನಿಯಾ ಮತ್ತು ಬೆಥಾನಿ ಅವರನ್ನು ಕ್ರಿಸ್ಟಿನಾ ಮೆಕಾಲೆ ಮತ್ತು ಸಬ್ರಿನಾ ಸಾಂತಮರಿಯಾ 6–3, 6–4ರಲ್ಲಿ ಮಣಿಸಿದರು. ಡಬಲ್ಸ್‌ನಲ್ಲಿ ಆರು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ಸಾನಿಯಾ ಈ ಬಾರಿ ವಿಂಬಲ್ಡನ್‌ ಟೂರ್ನಿಯಲ್ಲೂ ಬೆಥಾನಿ ಜೊತೆ ಆಡಲಿದ್ದಾರೆ.

ಅಗ್ರ ಶ್ರೇಯಾಂಕದ ಮೊಂಫಿಲ್ಸ್‌ಗೆ ಸೋಲು

ಮ್ಯಾಕ್ಸ್ ಪರ್ಸೆಲ್‌ ಮತ್ತೊಮ್ಮೆ ಮಿಂಚಿದರು. ಅಗ್ರ ಶ್ರೇಯಾಂಕದ ಗಯೆಲ್ ಮೊಂಫಿಲ್ಸ್‌ ಅವರನ್ನು ಮಣಿಸಿದ ಮ್ಯಾಕ್ಸ್‌ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. 28ನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ 6-4, 5-7, 6-4ರಲ್ಲಿ ಜಯ ಗಳಿಸಿದರು.

ಕಜಕಸ್ತಾನದ ಎಲಿನಾ ರೈಬಕಿನಾ ಎರಡನೇ ಶ್ರೇಯಾಂಕಿತೆ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಎದುರು 6-4, 7-6 (3)ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಎಸ್ಟೋನಿಯಾದ ಅನೆಟ್‌ ಕೊಂಟವೇಟ್‌ ಮೂರನೇ ಶ್ರೇಯಾಂಕದ ಕೆನಡಾ ಆಟಗಾರ್ತಿ ಬಿಯಾಂಕ ಆ್ಯಂಡ್ರುಸ್ಕು ‌ಅವರನ್ನು 6-3, 6-3ರಲ್ಲಿ ಮಣಿಸಿದರು. ರಷ್ಯಾದ ದಾರಿಯಾ ಕಸಕಿನಾ ನಾಲ್ಕನೇ ಶ್ರೇಯಾಂಕದ ಇಗಾ ಸ್ವಟೆಕ್‌ ವಿರುದ್ಧ 4-6, 6-0, 6-1ರಲ್ಲಿ ಜಯ ಗಳಿಸಿದರು. ಬೆಲಾರಸ್‌ನ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ 6-4, 6-1ರಲ್ಲಿ ಅಮೆರಿಕದ ಅಲಿಸಾನ್ ರಿಸ್ಕೆ ಅವರನ್ನು ಸೋಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು