ಕ್ಲೀವ್ಲ್ಯಾಂಡ್, ಅಮೆರಿಕ : ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಜೋಡಿಯು ಕ್ಲೀವ್ಲ್ಯಾಂಡ್ ಟೆನಿಸ್ ಚಾಂಪಿಯನ್ಷಿಪ್ನ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಭಾನುವಾರ ರಾತ್ರಿ ಇಲ್ಲಿ ನಡೆದ ಮಹಿಳಾ ಡಬಲ್ಸ್ ಪ್ರೀಕ್ವಾರ್ಟರ್ಫೈನಲ್ನಲ್ಲಿ ಈ ಜೋಡಿಯು 6-3 6-2ರಿಂದ ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೊವಾ ಮತ್ತು ರುಮೇನಿಯಾದ ಆ್ಯಂಡ್ರಿಯಾ ಮಿಟು ಜೋಡಿಯನ್ನು ಪರಾಭವಗೊಳಿಸಿದರು.
ಭಾರತ ಮತ್ತು ಅಮೆರಿಕ ಆಟಗಾರ್ತಿಯರು ಎರಡೂ ಸೆಟ್ಗಳಲ್ಲಿ ಸಂಪೂರ್ಣ ಪಾರಮ್ಯ ಮೆರೆದರು.