ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 14 ಇಡೀ ಭಾರತದ ಪಾಲಿಗೆ ಕರಾಳ ದಿನವಾಗಿದೆ: ಸಾನಿಯಾ ಮಿರ್ಜಾ

Last Updated 18 ಫೆಬ್ರುವರಿ 2019, 12:10 IST
ಅಕ್ಷರ ಗಾತ್ರ

ಬೆಂಗಳೂರು: ‘ಫೆಬ್ರುವರಿ 14 ಇಡೀ ಭಾರತದ ಪಾಲಿಗೆ ಕರಾಳ ದಿನವಾಗಿದೆ’ ಎಂದು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು, ಹೋದ ಗುರುವಾರ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸೇನೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಗಿನ ಜಾವ ಈ ಸಂದೇಶ ಇರುವ ಇಂಗ್ಲಿಷ್‌ ಟ್ವೀಟ್‌ ಮಾಡಿದ್ದಾರೆ. ಆದರೆ, ಶನಿವಾರ ತಡ ರಾತ್ರಿ ಸುದೀರ್ಘ ಸಂದೇಶವನ್ನು ಟ್ವೀಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

‘ಭಯೋತ್ಪಾದನೆಯನ್ನು ನಾವು ಖಂಡಿತವಾಗಿಯೂ ವಿರೋಧಿಸುತ್ತೇವೆ. ದೇಶದ ಎಲ್ಲ ಜನರೂ ಒಗ್ಗಟ್ಟು ಮತ್ತು ಶಾಂತಿಯಿಂದ ಬಾಳಬೇಕು. ಆದರೆ, ಸೆಲೆಬ್ರಿಟಿಗಳು ಟ್ವಿಟರ್, ಇನ್ಸ್ಟಾಗ್ರಾಮ್‌ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಬೇಕು ಎಂದು ಹಲವರು ಬಯಸುತ್ತಾರೆ.

ನಾವು ಬಹಿರಂಗವಾಗಿ ಸಂದೇಶ ಹಾಕದಿದ್ದರೂ ನಮ್ಮ ಮನಸ್ಸಲ್ಲಿ ದೇಶದ ಬಗ್ಗೆ ಪ್ರೀತಿ, ಆದ ಘಟನೆಯ ಕುರಿತ ವಿಷಾದ ಇದ್ದೇ ಇರುತ್ತದೆ. ಆದರೆ, ಪದೇ ಪದೇ ಇವರು ಏಕೆ ಮಾತಾಡುತ್ತಿಲ್ಲ. ಅವರು ಏಕೆ ಮಾತಾಡುತ್ತಿಲ್ಲ ಎಂಬ ಸಂದೇಶಗಳನ್ನು ಕೆಲವರು ಹರಿಬಿಡುತ್ತಾರೆ. ಅದರ ಬದಲು ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಇರುವ ವಾತಾ ವರಣ ನಿರ್ಮಿಸುವ ಅಗತ್ಯವಿದೆ’ ಎಂದು ಅವರ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT