ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾನ್ಯಾ, ರೇತಿನ್‌ಗೆ ಪ್ರಶಸ್ತಿ ಗರಿ

ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್‌ ಟೆನಿಸ್ ಚಾಂಪಿಯನ್‌ಷಿಪ್‌
Last Updated 12 ಮಾರ್ಚ್ 2021, 13:54 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಸಾನ್ಯಾ ಮಸಂದ್ ಹಾಗೂ ತಮಿಳುನಾಡಿನ ರೇತಿನ್ ಪ್ರಣಯ್ ಅವರು ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್‌ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕಿ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಇಲ್ಲಿಯ ಟಾಪ್‌ಸ್ಪಿನ್ ಟೆನಿಸ್ ಅಕಾಡೆಮಿಯಲ್ಲಿ ಶನಿವಾರ ಕೊನೆಗೊಂಡ ಟೂರ್ನಿಯ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಸಾನ್ಯಾ 4-6, 6-2, 6-2ರಿಂದ ಎರಡನೇ ಶ್ರೇಯಾಂಕದ ಆಟಗಾರ್ತಿ, ದೆಹಲಿಯ ಸಮೀಕ್ಷಾ ದಾಬಸ್‌ಗೆ ಸೋಲುಣಿಸಿದರು. ಮೊದಲ ಸೆಟ್‌ನಲ್ಲಿ ನಿರಾಸೆ ಅನುಭವಿಸಿದರೂ ಪುಟಿದೆದ್ದ ಸಾನ್ಯಾ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು.

ಬಾಲಕರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿ ಸಂಪೂರ್ಣ ಏಕಪಕ್ಷೀಯವಾದಂತೆ ಕಂಡುಬಂದಿತು. ರೇತಿನ್ ಪ್ರಣವ್‌ 6-1, 6-1ರಿಂದ ಸುಲಭವಾಗಿ ಕರ್ನಾಟಕದ ತಂಡದ ಆಕರ್ಷ್‌ ಗಾಂವಕರ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT