ಗುರುವಾರ , ಜೂಲೈ 9, 2020
28 °C

ಪ್ರತಿಭಾನ್ವಿತ ಟೆನಿಸ್‌ ಪಟುಗಳಿಗೆ ಶಿಷ್ಯವೇತನ: ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ ಸ್ಪೋರ್ಟ್ಸ್‌ ಸ್ಕೂಲ್ ಮತ್ತು ರೋಹನ್ ಬೋಪಣ್ಣ ಟೆನಿಸ್  ಅಕಾಡೆಮಿಯ ಜಂಟಿ ಸಹಯೋಗದಲ್ಲಿ ಜೂನಿಯರ್ ವಿಭಾಗದ ಟೆನಿಸ್‌ ಆಟಗಾರರಿಗೆ ಶಿಷ್ಯವೇತನ ನೀಡುವ ಯೋಜನೆಗೆ ಚಾಲನೆ ನೀಡಿದೆ.

12, 14 ಮತ್ತು 16 ವರ್ಷದೊಳಗಿನವರ ವಿಭಾಗಗಳ ಪ್ರತಿಭಾನ್ವಿತ ಆಟಗಾರರಿಗೆ ಈ ಶಿಷ್ಯವೇತನ ನೀಡಲು ನಿರ್ಧರಿಸಲಾಗಿದೆ.  ಎಐಟಿಎ ಶ್ರೇಯಾಂಕದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.

‘ಅರ್ಹ ಆಟಗಾರರು ಅರ್ಜಿ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಆನ್‌ಲೈನ್ ಮೂಲಕ ಸ್ಕ್ರೀನಿಂಗ್ ಟೆಸ್ಟ್‌ ನಡೆಯಲಿದೆ. ಟೆನಿಸ್, ಫಿಟ್‌ನೆಸ್, ರ‍್ಯಾಂಕಿಂಗ್, ನಡವಳಿಕೆ ಮತ್ತು ಬದ್ಧತೆ ಗುಣವನ್ನು ಪರೀಕ್ಷಿಸಲಾಗುತ್ತದೆ. ಜೂನ್ 30ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಗಳಿಗೆ info@thesportsschool.com ಮತ್ತು www.thesportsschool.com  ವೆಬ್‌ಸೈಟ್ ಸಂಪರ್ಕಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು