ಮಯಾಮಿ (ಎಎಫ್ಪಿ): ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಮಯಾಮಿ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದರು. ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಮೂರು ಸೆಟ್ಗಳ ಹಣಾಹಣಿಯಲ್ಲಿ ಸ್ಪೇನ್ನ ಸೂಪರ್ ಸ್ಟಾರ್ ಆಟಗಾರನನ್ನು ಸದೆಬಡಿದರು.

ವಿಶ್ವ ಕ್ರಮಾಂಕದಲ್ಲಿ 36ನೇ ಸ್ಥಾನದಲ್ಲಿರುವ ಸೆಬಾಸ್ಟಿಯನ್ ಪುರುಷರ ಸಿಂಗಲ್ಸ್ 32ರ ಘಟ್ಟದ ಪಂದ್ಯದಲ್ಲಿ 6-3, 5-7, 6-4ರಿಂದ ಅಲ್ಕರಾಜ್ ಅವರನ್ನು ಮಣಿಸಿದರು. ಕಳೆದ ಆವೃತ್ತಿಯಲ್ಲೂ ಅಲ್ಕರಾಜ್ 55ನೇ ಕ್ರಮಾಂಕದ ಡೇವಿಡ್ ಗೋಫಿನ್ (ಬೆಲ್ಜಿಯಂ) ವಿರುದ್ಧ ಸೋತು ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು.

ಆಸ್ಟ್ರೇಲಿಯಾ ಓಪನ್ ಕಿರೀಟ ಗೆಲ್ಲುವ ಮೂಲಕ 2026ರ ಋತುವನ್ನು ಭರ್ಜರಿಯಾಗಿ ಆರಂಭಿಸಿದ್ದ 22 ವರ್ಷ ವಯಸ್ಸಿನ ಅಲ್ಕರಾಜ್ ಅವರು ನಂತರ ದೋಹಾದಲ್ಲಿ ಪ್ರಶಸ್ತಿ ಗೆದ್ದರು. ಬಳಿಕ ಇಂಡಿಯನ್ ವೆಲ್ಸ್ ಸೆಮಿಫೈನಲ್ನಲ್ಲಿ
ರಷ್ಯಾದ ಡೇನಿಯಲ್ ಮೆಡ್ವೆಡೇವ್ಗೆ ಮಣಿದಿದ್ದರು. ಇದರಿಂದ 16 ಪಂದ್ಯಗಳ ಗೆಲುವಿನ ಓಟಕ್ಕೆ ತಡೆಬಿದ್ದಿತ್ತು. ಪ್ರಸಕ್ತ ವರ್ಷ ಅಲ್ಕರಾಜ್ ಅವರಿಗೆ ಎರಡನೇ ಸೋಲು ಇದಾಗಿದೆ.

ಸೆಬಾಸ್ಟಿಯನ್ ಅವರು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸ್ಪ್ಯಾನಿಷ್ ಅರ್ಹತಾ ಆಟಗಾರ ಮಾರ್ಟಿನ್ ಲ್ಯಾಂಡಲೂಸ್ ಅವರನ್ನು ಎದುರಿಸಲಿದ್ದಾರೆ. ಮಾರ್ಟಿನ್ 6-3, 7-6 (7/2)ರಿಂದ 14ನೇ ಶ್ರೇಯಾಂಕದ ಕರೆನ್ ಖಚನೋವ್ (ರಷ್ಯಾ) ಅವರಿಗೆ ಆಘಾತ ನೀಡಿದರು.

ಸಬಲೆಂಕಾ ಮುನ್ನಡೆ: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಮಹಿಳೆಯರ ಸಿಂಗಲ್ಸ್ 32ರ ಘಟ್ಟದ ಪಂದ್ಯದಲ್ಲಿ 6-4, 6-2 ಅಂತರದಿಂದ 72ನೇ ಶ್ರೇಯಾಂಕಿತ ಅಮೆರಿಕದ ಕ್ಯಾಟಿ ಮೆಕ್ನಾಲಿ ಅವರನ್ನು ಸೋಲಿಸಿದರು.

ಬೆಲರೂಸ್ನ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಝೆಂಗ್ ಕಿನ್ವೆನ್ ಅವರನ್ನು ಎದುರಿಸುವರು. 23ನೇ ಶ್ರೇಯಾಂಕದ ಚೀನಾ ಆಟಗಾರ್ತಿ 6-3, 6-4ರಿಂದ 15ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ (ಅಮೆರಿಕ) ಅವರನ್ನು ಮಣಿಸಿದರು.

ಎರಡನೇ ಶ್ರೇಯಾಂಕದ ಎಲಿನಾ ರಿಬಾಕಿನಾ 6-3, 6-4ರಿಂದ ಉಕ್ರೇನ್ನ ಮಾರ್ತಾ ಕೋಸ್ಟ್ಯುಕ್ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು. ಕಜಾಕಸ್ತಾನದ ರಿಬಾಕಿನಾ ಅವರು ಮುಂದಿನ ಪಂದ್ಯದಲ್ಲಿ ಕ್ವಾಲಿಫೈಯರ್ ಆಟಗಾರ್ತಿ ತಾಲಿಯಾ ಗಿಬ್ಸನ್ ಅವರನ್ನು ಎದುರಿಸುವರು. ಆಸ್ಟ್ರೇಲಿಯಾದ ತಾಲಿಯಾ 6-2, 6-2ರಿಂದ 18ನೇ ಶ್ರೇಯಾಂಕದ ಇವಾ ಜೊವಿಕ್ (ಅಮೆರಿಕ) ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.