ಶನಿವಾರ, ಜನವರಿ 23, 2021
28 °C

ಆಸ್ಟ್ರೇಲಿಯಾ ಓಪನ್‌ಗೂ ಮುನ್ನ ಪ್ರದರ್ಶನ ಪಂದ್ಯಗಳ ಟೂರ್ನಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಗೆ ಪೂರ್ವಭಾವಿಯಾಗಿ ಸಿಟಿ ಮೆಮೋರಿಯಲ್ ಡ್ರೈವ್ ಟೆನಿಸ್ ಸೆಂಟರ್‌ನಲ್ಲಿ ಇದೇ 29ರಂದು ಪ್ರದರ್ಶನ ಪಂದ್ಯಗಳು ನಡೆಯಲಿವೆ ಎಂದು ಟೆನಿಸ್ ಆಸ್ಟ್ರೇಲಿಯಾ ಶನಿವಾರ ತಿಳಿಸಿದೆ. ಪಂದ್ಯಗಳಲ್ಲಿ ಸೆರೆನಾ ವಿಲಿಯಮ್ಸ್, ನವೊಮಿ ಒಸಾಕ, ರಫೆಲ್ ನಡಾಲ್, ನೊವಾಕ್ ಜೊಕೊವಿಚ್, ಆ್ಯಶ್ಲಿ ಬಾರ್ಟಿ, ಸಿಮೋನಾ ಹಲೆಪ್, ಡೊಮಿನಿಕ್ ಥೀಮ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದೂ ಅದು ತಿಳಿಸಿದೆ.

ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳಲು ಬರುವವರ ಕ್ವಾರಂಟೈನ್‌ ಅವಧಿ ಮುಗಿದ ಕೂಡಲೇ ‘ಎ ಡೇ ಅಟ್ ದಿ ಡ್ರೈವ್’ ಎಂಬ ಹೆಸರಿನಲ್ಲಿ ಈ ಪಂದ್ಯಗಳು ನಡೆಯಲಿದೆ. ಇದಾಗಿ ಒಂದು ವಾರದ ನಂತರ ಮೆಲ್ಬರ್ನ ಪಾರ್ಕ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ನಡೆಯಲಿದೆ. ಟೂರ್ನಿಯ ನಂತರ ಅಡಿಲೇಡ್‌ನಲ್ಲಿ ಡಬ್ಲ್ಯುಟಿಎ ಟೂರ್ 500 ಟೂರ್ನಿ ಆಯೋಜಿಸುವುಕ್ಕೂ ಟೆನಿಸ್ ಆಸ್ಟ್ರೇಲಿಯಾ ಮುಂದಾಗಿದೆ.

ನೂರಾರು ಆಟಗಾರರು ಮತ್ತು ಸಿಬ್ಬಂದಿ ಇದೇ 15ರಿಂದ ಆಸ್ಟ್ರೇಲಿಯಾಕ್ಕೆ ಬರಲಿದ್ದು ಕೋವಿಡ್‌–19ಕ್ಕೆ ಸಂಬಂಧಿಸಿದ ಆರೋಗ್ಯ ಶಿಷ್ಟಾಚಾರದ ಭಾಗವಾಗಿ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗುವರು. ಈ ಸಂದರ್ಭದಲ್ಲಿ ಅಭ್ಯಾಸಕ್ಕಾಗಿ ಕೇವಲ ಐದು ತಾಸು ಹೋಟೆಲ್‌ನಿಂದ ಹೊರಗೆ ಹೋಗಲು ಅವಕಾಶ ಇರುತ್ತದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.