ಮಂಗಳವಾರ, ಸೆಪ್ಟೆಂಬರ್ 24, 2019
29 °C

ಫ್ಯಾಷನ್‌ ವೀಕ್‌ನಲ್ಲಿ ಸೆರೆನಾ ಸಂಚಲನ

Published:
Updated:
Prajavani

ನ್ಯೂಯಾರ್ಕ್ : ನಾಲ್ಕು ದಿನಗಳ ಹಿಂದಷ್ಟೇ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ರನ್ನರ್ ಅಪ್‌ ಆಗಿದ್ದ ಸೆರೆನಾ ವಿಲಿಯಮ್ಸ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡರು.

ನ್ಯೂಯಾರ್ಕ್‌ ಫ್ಯಾಷನ್ ವೀಕ್‌ ಕಾರ್ಯಕ್ರಮದಲ್ಲಿ ಅವರು ತಮ್ಮ ಮಗಳು ಅಲೆಕ್ಸಿಸ್‌ ಒಲಿಂಪಿಯಾಳನ್ನು ಕಂಕುಳಲ್ಲಿ ಇಟ್ಟುಕೊಂಡು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಟೆನಿಸ್ ಅಂಗಳದಲ್ಲಿ ವೈವಿಧ್ಯಮಯ ಪೋಷಾಕುಗಳನ್ನು ಧರಿಸಿ ಚರ್ಚೆಗೆ ಗ್ರಾಸವಾಗುವ ಸೆರೆನಾ, ಫ್ಯಾಷನ್‌ ವೀಕ್‌ನಲ್ಲಿ  ಆಕರ್ಷಕ ಉಡುಪು ಧರಿಸಿದ್ದರು.  37 ವರ್ಷದ ಟೆನಿಸ್ ತಾರೆಯು ತಾವೇ ವಿನ್ಯಾಸಗೊಳಿಸಿದ ಉರಗಚರ್ಮದ ಮಿನಿ ಸ್ಕರ್ಟ್‌ ಮತ್ತು ಕಪ್ಪುಬಣ್ಣದ ಟಾಪ್ ಧರಿಸಿದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ‘#ಮೀ ಟೂ’ ಚಳುವಳಿಯ ರೂವಾರಿ ತರಾನಾ ಬರ್ಕಿ, ‘ಸೆರೆನಾ ಅವರನ್ನು ನಾನು ಬಹಳ ಇಷ್ಟಪಡುತ್ತೇನೆ. ಟೆನಿಸ್ ನಂತರ ಫ್ಯಾಷನ್ ಜಗತ್ತಿನಲ್ಲಿ ಅವರು ದೊಡ್ಡ ಸಾಧನೆ ಮಾಡಬಲ್ಲ ಸಮರ್ಥರು’ ಎಂದಿದ್ದಾರೆ.

Post Comments (+)