ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್‌ ಕಣಕ್ಕೆ ಸೆರೆನಾ ವಿಲಿಯಮ್ಸ್

Last Updated 17 ಜೂನ್ 2020, 15:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಈ ಬಾರಿಯ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವುದಾಗಿ ಸೆರೆನಾ ವಿಲಿಯಮ್ಸ್‌ ತಿಳಿಸಿದ್ದಾರೆ.

23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ತಮ್ಮ ತವರಿನಂಗಳದಲ್ಲಿ ಮತ್ತೊಮ್ಮೆ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲಿ ಒಟ್ಟು ಆರು ಬಾರಿ ಅಮೆರಿಕ ಓಪನ್ ಕಿರೀಟ ಅವರ ಮುಡಿಗೇರಿದೆ. ಹೋದ ಎರಡು ವರ್ಷಗಳಲ್ಲಿ 38 ವರ್ಷದ ಸೆರೆನಾ ಅವರು ರನ್ನರ್ ಅಪ್ ಆಗಿದ್ದರು.

ಯು.ಎಸ್. ಟೆನಿಸ್ ಸಂಸ್ಥೆಯು ಬುಧವಾರ ಪ್ರದರ್ಶಿಸಿದ ಟೂರ್ನಿಯ ವಿಡಿಯೊದಲ್ಲಿ ‘ಕಣಕ್ಕೆ ಮರಳಲು ಇನ್ನಷ್ಟು ಕಾಯುವುದು ಸಾಧ್ಯವಿಲ್ಲ’ ಎಂದು ಸೆರೆನಾ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಪ್ರಸರಣದಿಂದಾಗಿ ಈ ಬಾರಿಯ ಟೂರ್ನಿಯನ್ನು ಆಯೋಜಿಸುವ ಕುರಿತು ಅನಿಶ್ಚಿತತೆ ಇತ್ತು. ಆದರೆ, ಮಂಗಳವಾರ ಈ ವರ್ಷ ಟೂರ್ನಿಯನ್ನು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಸುವುದಾಗಿ ನ್ಯೂಯಾರ್ಕ್ ಗವರ್ನರ್ ಘೋಷಿಸಿದ್ದರು. ಅದರಿಂದಾಗಿ ಆಗಸ್ಟ್ 31ರಿಂದ ಸೆಪ್ಟೆಂಬರ್ 13ರವರೆಗೆ ಟೂರ್ನಿಯು ನಡೆಯಲಿದೆ.

ಹೋದ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ನಡೆದಿತ್ತು. ಅದರ ನಂತರ ಪ್ಯಾರಿಸ್‌ನಲ್ಲಿ ನಡೆಯಬೇಕಿದ್ದ ಫ್ರೆಂಚ್ ಓಪನ್ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯಬೇಕಿದ್ದ ವಿಂಬಲ್ಡನ್ ಟೆನಿಸ್ ಟೂರ್ನಿಗಳು ರದ್ದಾಗಿದ್ದವು.1945ರ ನಂತರ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಟೂರ್ನಿಗಳು ರದ್ದಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT