ಸೋತು ಅಳುತ್ತಿದ್ದ ಕಿರಿಯಳನ್ನು ಸಂತೈಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌

7

ಸೋತು ಅಳುತ್ತಿದ್ದ ಕಿರಿಯಳನ್ನು ಸಂತೈಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌

Published:
Updated:

ಮೆಲ್ಬೋರ್ನ್: ಗೆಲುವಿನಿಂದ ಬೀಗಿದವರು ಸೋತವರಿಗೆ ಕೈಕುಲುಕಿ ಮುನ್ನಡೆಯುವುದು ಕ್ರೀಡಾ ಮನೋಭಾವ ಎನಿಸಿಕೊಳ್ಳುತ್ತದೆ. ಅಮೆರಿಕದ ಹಿರಿಯ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೋಲಿನ ಬೇಸರದಿಂದ ಕಣ್ಣೀರಾಗಿದ್ದ ಕಿರಿಯ ಆಟಗಾರ್ತಿಯನ್ನು ತಬ್ಬಿಕೊಂಡು ಸಂತೈಸುವ ಮೂಲಕ ‘ನಾನು ಟೆನಿಸ್ ಆಟಗಾರ್ತಿಯಷ್ಟೇ ಅಲ್ಲ, ಹೃದಯವುಳ್ಳ ಹೆಣ್ಣು’ ಎಂಬುದನ್ನೂ ಸಾರಿ ಹೇಳಿದ್ದಾರೆ.

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಶನಿವಾರ 18 ವರ್ಷ ವಯೋಮಾನದ ಉಕ್ರೇನ್‌ ಆಟಗಾರ್ತಿ ಡಯಾನಾ ಯಸ್ಟ್ರೆಮ್‌ಸ್ಕಾರನ್ನು 67 ನಿಮಿಷಗಳ ಸೆಣೆಸಾಟದಲ್ಲಿ 6–2, 6–1 ಅಂಕಗಳಿಂದ ಸೋಲಿಸಿದ ಸೆರೆನಾ ವಿಲಿಯಮ್ಸ್‌ 16ನೇ ಸ್ಥಾನಕ್ಕೇರಿದರು. 

ಸೆರೆನಾ ವಿಲಿಯಮ್ಸ್‌ ಅವರನ್ನು ಆದರ್ಶವಾಗಿ ಆರಾಧಿಸುತ್ತಾ ಬಂದ ಉಕ್ರೇನ್‌ನ ಡಯಾನಾ ತನಗೆ ಐದು ವರ್ಷವಿದ್ದಾಗ ಟೆನ್ನಿಸ್ ರ‍್ಯಾಕೆಟ್ ಕೈಲಿ ಹಿಡಿದವರು. ತನ್ನ ಅಭಿಮಾನಿ ಮತ್ತು ಪ್ರತಿಸ್ಪರ್ಧಿಯೂ ಆಗಿದ್ದ ಡಯಾನಾರ ಆಟವನ್ನು ಶ್ಲಾಘಿಸಿ, ಕಣ್ಣೀರು ಒರೆಸಿದ ಸೆರೆನಾರ ನಡೆ ಇದೀಗ ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸೆಪ್ಟೆಂಬರ್ 2018ರಲ್ಲಿ ಜಪಾನ್‌ನ ನವೊಮಿ ಒಸಾಕ ಎದುರು ಸೋಲನುಭವಿಸಿದ ಸೆರೆನಾ ವಿಲಿಯಮ್ಸ್‌, ಗ್ರಾನ್‌ಸ್ಲಾಮ್‌ನಿಂದ ಚ್ಯುತರಾದಾಗ ಕಣ್ಣೀರಿಟ್ಟಿದ್ದರು. ನವೊಮಿ ಅವರ ಸಂಭ್ರಮಾಚರಣೆಗಿಂತಲೂ ಸೆರೆನಾ ಅವರ ಕಣ್ಣೀರು ಎಲ್ಲರ ಗಮನ ಸೆಳೆದಿತ್ತು.

ಬರಹ ಇಷ್ಟವಾಯಿತೆ?

 • 30

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !