ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಯಾಮಿ ಓಪನ್‌ಗೆ ಶರಪೊವಾ ಅಲಭ್ಯ

Last Updated 1 ಮಾರ್ಚ್ 2019, 17:32 IST
ಅಕ್ಷರ ಗಾತ್ರ

ಮಿಯಾಮಿ: ರಷ್ಯಾದ ಮರಿಯಾ ಶರಪೊವಾ ಮಾರ್ಚ್‌ನಲ್ಲಿ ನಡೆಯಲಿರುವ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಶರಪೊವಾ ಅವರ ಬಲಭುಜಕ್ಕೆ ಗಾಯವಾಗಿದ್ದು, ಕಳೆದ ವಾರವಷ್ಟೆ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ದರಿಂದ ಅವರು ಮುಂಬರುವ ಟೂರ್ನಿಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

‘ಶೆರಪೊವಾ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ. 2020ರ ಮಿಯಾಮಿ ಓಪನ್‌ ಟೂರ್ನಿಯಲ್ಲಿ ಅವರು ಆಡುವಂತಾಗಲಿ’ ಎಂದು ಮಿಯಾಮಿ ಓಪನ್ ಸಂಘಟಕರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT