ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಅಂಗವಿಕಲರಿಗಾಗಿಯೇ ಸ್ಥಾಪಿ ಸಲಾಗಿರುವ ಡ್ಯೂಸ್ ಟೆನಿಸ್ ಸೆಂಟರ್ (ಡಿಟಿಸಿ) ಯಲ್ಲಿ ವ್ಹೀಲ್ಚೇರ್ ಟೆನಿಸ್ ಟೂರ್ನಮೆಂಟ್ಗೆ ಜಿಲ್ಲಾಧಿಕಾರಿ ಪ್ರಭು ಹಾಗೂ ತಹಶೀಲ್ದಾರ್ ಗಗನಸಿಂಧು ಬುಧವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಪ್ರಭು, ‘ದೇಶದ ಮೊದಲ ವ್ಹೀಲ್ಚೇರ್ ಟೆನಿಸ್ ತರಬೇತಿ ಕೇಂದ್ರವು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಆಗಿರುವುದು ಹೆಮ್ಮೆಯ ಸಂಗತಿ. ಜಿಲ್ಲಾಡಳಿತದಿಂದ ಮತ್ತು ತಾಲ್ಲೂಕು ಆಡಳಿತದಿಂದ ನಿಮಗೆ ಸಂಪೂರ್ಣ ಸಹಕಾರ ಸಿಗುತ್ತದೆ’ ಎಂದು ಹೇಳಿದರು.

ಡಿಟಿಸಿ ಅಧ್ಯಕ್ಷ ಸಿ.ಎ.ಸುನಿಲ್ ಜೈನ್ ಮಾತನಾಡಿ, ‘ಡಿಟಿಸಿ ಒಂದು ತಂಡದ ಪ್ರಯಾಣ. ದೈಹಿಕ ಸಾಮರ್ಥ್ಯದ ಹೊರತಾಗಿಯೂ ಸಾಧಕರನ್ನು ಸೃಷ್ಟಿಸುವ ಧ್ಯೇಯ ನಮ್ಮದು’ ಎಂದು ಹೇಳಿದರು.

ತಹಶೀಲ್ದಾರ್ ಗಗನಸಿಂಧು ಮಾತನಾಡಿ, ‘ಈ ಕ್ರೀಡಾ ಕೇಂದ್ರವು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ. ಇದು ಕ್ರೀಡೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಗೆ ಹೊಸ ರೂಪ ನೀಡಿದೆ. ಸರ್ಕಾರ, ನಾಗರಿಕ ಸಮಾಜ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಏನೆಲ್ಲಾ ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ’ ಎಂದು ಹೇಳಿದರು.

ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-16-1963266168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.