ಬುಧವಾರ, ಅಕ್ಟೋಬರ್ 20, 2021
24 °C

ಟೆನಿಸ್ ಟೂರ್ನಿ: ಆಕಾಂಕ್ಷಾ ಮಣಿಸಿ ಪ್ರಶಸ್ತಿ ಗೆದ್ದ ಸೋಹಾ ಸಾದಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಆಟವಾಡಿದ ನಗರದ ಸೋಹಾ ಸಾದಿಕ್ ಅವರು ಪಿಬಿಐ ಸಿಎಸ್‌ಇ ಎಐಟಿಎ ಮಹಿಳೆಯರ ಟೆನಿಸ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಜ್ಯ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಶನಿವಾರ ಅವರು ಮಹಾರಾಷ್ಟ್ರದ ಆಕಾಂಕ್ಷಾ ವಿರುದ್ಧ ಜಯ ಗಳಿಸಿದರು. 

ಮೊದಲ ಸೆಟ್‌ನಲ್ಲಿ ಸೋತರೂ ನಂತರ ಚೇತರಿಸಿಕೊಂಡು 4-6, 6-3, 6-1ರಲ್ಲಿ ಗೆಲುವು ಸಾಧಿಸಿದ ಸೋಹಾ ಈ ವರ್ಷದ ಮೂರನೇ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದೇ ಟೂರ್ನಿಯ ಡಬಲ್ಸ್‌ನಲ್ಲೂ ಶುಕ್ರವಾರ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು. ಆ ಪಂದ್ಯದಲ್ಲಿ ಅವರಿಗೆ ಆಕಾಂಕ್ಷಾ ಜೋಡಿಯಾಗಿದ್ದರು.

₹ 1 ಲಕ್ಷ ಬಹುಮಾನ ಮೊತ್ತದ ಟೂರ್ನಿಯ ಪ್ರಶಸ್ತಿ ಸುತ್ತಿನ ಹಣಾಹಣಿಗೆ ಭಾರಿ ಮಳೆ ಕಾಡಿತು. ಹೀಗಾಗಿ ಎರಡು ತಾಸು ತಡವಾಗಿ ಪಂದ್ಯ ಆರಂಭಿಸಲಾಯಿತು. ಮೊದಲ ಸೆಟ್‌ನ ಆರಂಭದಲ್ಲಿ ಸೋಹಾ 4–1ರ ಮುನ್ನಡೆ ಸಾಧಿಸಿದ್ದರು. ಆದರೆ ನಂತರ ಎದುರಾಳಿ ಆಧಿಪತ್ಯ ಮೆರೆದರು.

ಎರಡನೇ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಸೋಹಾ ನಿರ್ಣಾಯಕ ಮೂರನೇ ಸೆಟ್‌ನಲ್ಲಿ 2–1ರ ಮುನ್ನಡೆ ಗಳಿಸಿದ್ದಾಗ ಆಕಾಂಕ್ಷಾ ಅವರ ಸರ್ವ್ ಮುರಿದು ಮುನ್ನಡೆ ಹೆಚ್ಚಿಸಿಕೊಂಡ ಅವರಿಗೆ ಐದನೇ ಗೇಮ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಈ ಹಂತದಲ್ಲಿ ಛಲ ಬಿಡದೆ ಕಾದಾಡಿ ಗೇಮ್‌ ತಮ್ಮದಾಗಿಸಿಕೊಂಡರು. ನಂತರ ನಾಗಾಲೋಟದ ಮೂಲಕ ಸೆಟ್ ಹಾಗೂ ಪಂದ್ಯ ಗೆದ್ದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.