ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್‌ ಟೆನಿಸ್‌: ರಕ್ಷಿತ್‌, ಅನರ್ಘ್ಯಾಗೆ ಡಬಲ್‌ ಪ್ರಶಸ್ತಿ

ರಾಜ್ಯಮಟ್ಟದ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಅನರ್ಘ್ಯಾಗೆ ಒಟ್ಟು ಮೂರು ಪ್ರಶಸ್ತಿ
Last Updated 13 ನವೆಂಬರ್ 2018, 17:45 IST
ಅಕ್ಷರ ಗಾತ್ರ

ಹೊಸಪೇಟೆ: ಕೆನರಾ ಬ್ಯಾಂಕ್‌ ಪ್ರತಿನಿಧಿಸುವ ಧಾರವಾಡದ ರಕ್ಷಿತ್‌ ಬಾರಿಗಿಡದ ಮತ್ತು ಎಂ.ಎಸ್‌.ಎಸ್‌. ಅಕಾಡೆಮಿಯ ಅನರ್ಘ್ಯಾ ಮಂಜುನಾಥ ಅವರು ಇಲ್ಲಿ ನಡೆದ ಸಿ.ವಿ.ಎಲ್‌. ಶಾಸ್ತ್ರಿ ಸ್ಮಾರಕ ರಾಜ್ಯಮಟ್ಟದ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ತಲಾ ಎರಡು ಪ್ರಶಸ್ತಿ ಗೆದ್ದುಕೊಂಡರು.

ಜೂನಿಯರ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅನರ್ಘ್ಯಾ 12–10, 11–6, 6–11, 11–4, 9–11, 11–9ರಲ್ಲಿ ಬೆಂಗಳೂರಿನ ಸ್ಕೈಸ್‌ ಕ್ಲಬ್‌ನ ಯಶಸ್ವಿನಿ ಘೋರ್ಪಡೆ ಎದುರು ಜಯ ಗಳಿಸಿದರು.

ಯೂತ್‌ ಬಾಲಕಿಯರ ವಿಭಾಗದಲ್ಲಿ ಅನರ್ಘ್ಯಾ ಅವರು ದಿನದ ಎರಡನೇ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಅವರು 11–8, 6–11, 14–12, 11–9, 6–11, 8–11, 11–8ರಲ್ಲಿ ಬಿವಿಎಂ ಕ್ಲಬ್‌ನ ವಿ. ಖುಷಿ ಎದುರು ಜಯ ಸಾಧಿಸಿದರು. ಈ ಟೂರ್ನಿಯಲ್ಲಿ ಅನರ್ಘ್ಯಾ ಒಟ್ಟಾರೆಯಾಗಿ ಗೆದ್ದ ಮೂರನೇ ಪ್ರಶಸ್ತಿ ಇದು. ಸಬ್ ಜೂನಿಯರ್‌ ವಿಭಾಗದಲ್ಲಿ ಮೊದಲ ಪ್ರಶಸ್ತಿ ಪಡೆದಿದ್ದರು.

ಯೂತ್‌ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ರಕ್ಷಿತ್‌ 11–5, 11–4, 11–7, 7–11, 8–11, 11–6ರಲ್ಲಿ ಬ್ಯಾಂಕ್‌ ಆಫ್‌ ಬರೋಡಾ ಪ್ರತಿನಿಧಿಸುವ ಧಾರವಾಡದ ಸಮರ್ಥ ಕುರಡಿಕೇರಿ ಎದುರು ಜಯ ಪಡೆದರು. ಪುರುಷರ ವಿಭಾಗದ ಫೈನಲ್‌ನಲ್ಲಿ ರಕ್ಷಿತ್‌ 11–4, 1–11, 11–7, 11–8, 11–7ರಲ್ಲಿ ಸಮರ್ಥ ಅವರನ್ನು ಮಣಿಸಿ ಡಬಲ್‌ ಗೌರವಕ್ಕೆ ಪಾತ್ರರಾದರು.

ಕೆನರಾ ಬ್ಯಾಂಕ್‌ ಪ್ರತಿನಿಧಿಸುವ ಮರಿಯಾ ರೋನಿ ಮಹಿಳಾ ವಿಭಾಗದ ಸಿಂಗಲ್ಸ್‌ನ ಫೈನಲ್‌ನಲ್ಲಿ 11–7, 11–8, 11–9, 10–12, 11–5ರಲ್ಲಿ ಬಿಎನ್‌ಎಂ ಕ್ಲಬ್‌ನ ವಿ. ಖುಷಿ ಎದುರು ಜಯ ಪಡೆದು ಚಾಂಪಿಯನ್‌ ಆದರು. ಜೂನಿಯರ್‌ ಬಾಲಕರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರಿನ ಬಿಎನ್‌ಎಂ ಕ್ಲಬ್‌ನ ಕೃಷ್ಣ ಸುಂದರನ್‌ 8–11, 11–8, 7–11, 11–9, 9–11, 12–10, 11–6ರಲ್ಲಿ ‌‌‌ಸಮರ್ಥ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT