ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್‌: ಬೆಂಗಳೂರು ದಕ್ಷಿಣ, ಉತ್ತರ ತಂಡಗಳಿಗೆ ಪ್ರಶಸ್ತಿ

ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೂರ್ನಿ
Last Updated 23 ಅಕ್ಟೋಬರ್ 2018, 15:37 IST
ಅಕ್ಷರ ಗಾತ್ರ

ಬೀದರ್: ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ತಂಡಗಳು ಮಂಗಳವಾರ ಇಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿವೆ.

ಬಾಲಕರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು ದಕ್ಷಿಣ ತಂಡ 3–2ರಲ್ಲಿ ಬೆಂಗಳೂರು ಉತ್ತರ ತಂಡದ ವಿರುದ್ಧ ಜಯ ಸಾಧಿಸಿತು.

ಫೈನಲ್‌ ಪಂದ್ಯದ ಮೊದಲ ಸಿಂಗಲ್ಸ್‌ನಲ್ಲಿ ಬೆಂಗಳೂರು ದಕ್ಷಿಣ ತಂಡದ ನೀರಜ್‌ 11–8, 12–10, 11–9ರಿಂದ ಬೆಂಗಳೂರು ಉತ್ತರ ತಂಡದ ತೇಜಸ್‌ ವಿರುದ್ಧ ಗೆಲುವು ಪಡೆದರು.

ಎರಡನೇ ಸಿಂಗಲ್ಸ್‌ನಲ್ಲಿ ಆದಿತ್ಯ 6–11, 12–10, 8–11, 7–11ರಲ್ಲಿ ಸಮರ್ಥ ಎದುರು ಸೋತರು.

ಮೂರನೇ ಸಿಂಗಲ್ಸ್‌ನಲ್ಲಿ ಭರತ 11–7, 9–11, 10–12, 11–6, 11–5ರಲ್ಲಿ ಅಭಿಜೀತ ಅವರನ್ನು ಮಣಿಸಿದರು. ನಾಲ್ಕನೇ ಸಿಂಗಲ್ಸ್‌ನಲ್ಲಿ ನೀರಜ್‌ 9–11, 5–11, 11–5, 9–11ರಲ್ಲಿ ಸಮರ್ಥ ವಿರುದ್ಧ ಪರಾಭವಗೊಂಡರು. ಐದನೇ ಸಿಂಗಲ್ಸ್‌ನಲ್ಲಿ ಆದಿತ್ಯ 11–5, 7–11, 6–1, 11–9, 12–10ರಲ್ಲಿ ತೇಜಸ್‌ ವಿರುದ್ಧ ಗೆದ್ದರು.


ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡ ಚಾಂಪಿಯನ್‌: ಬಾಲಕಿಯರ ವಿಭಾಗದಲ್ಲಿ ಶ್ವೇತಾ ಜೆ., ಮಧುಮಿತಾ ಕೆ., ಧನಲಕ್ಷ್ಮಿ ಕೆ., ಅರ್ಚನಾ ಎಸ್. ಹಾಗೂ ಭವಾನಿ ಬಿ.ಆರ್. ಅವರನ್ನೊಳಗೊಂಡ ಬೆಂಗಳೂರು ಉತ್ತರ ತಂಡ ಪ್ರಶಸ್ತಿ ಜಯಿಸಿತು.

ಫೈನಲ್‌ ಪಂದ್ಯದ ಮೊದಲ ಸಿಂಗಲ್ಸ್‌ನಲ್ಲಿ ಮಧುಮಿತಾ ಕೆ. 11–3, 11–4 ರಲ್ಲಿ ಹಾಸನದ ಲಿಖಿತಾ ಡಿ.ವಿ. ವಿರುದ್ಧ ಗೆಲುವು ಪಡೆದರು. ಎರಡನೆಯ ಸಿಂಗಲ್ಸ್‌ನಲ್ಲಿ ಶ್ವೇತಾ 11–3, 11–2ರಲ್ಲಿ ಪೂರ್ವಿಕಾ ಹಾಗೂ ಮೂರನೇ ಸಿಂಗಲ್ಸ್‌ನಲ್ಲಿ ಅರ್ಚನಾ 11–1, 11–1ರಲ್ಲಿ ದೀಪ್ತಿ ಎಂ. ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT