ಗುರುವಾರ , ಸೆಪ್ಟೆಂಬರ್ 19, 2019
24 °C
ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್‌ ಟೂರ್ನಿ

ಕ್ವಾರ್ಟರ್‌ಫೈನಲ್‌ಗೆ ಜೊಕೊವಿಚ್‌: ರೋಜರ್ ಫೆಡರರ್‌ ಪರಾಭವ

Published:
Updated:
Prajavani

ಸಿನ್ಸಿನಾಟಿ (ಎಎಫ್‌ಪಿ): ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ ಜೊಕೊವಿಚ್‌ ಅವರು ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಆದರೆ ಅನುಭವಿ ಆಟಗಾರ ರೋಜರ್‌ ಫೆಡರರ್‌ ನಿರಾಸೆ ಅನುಭವಿಸಿದರು.

ಸರ್ಬಿಯಾದ ಜೊಕೊವಿಚ್‌ ಅವರು ಸ್ಪೇನ್‌ ಆಟಗಾರ ಪ್ಯಾಬ್ಲೊ ಕ್ಯಾರೆನೊ ಬಸ್ಟಾ ವಿರುದ್ಧ 6–3, 6–4 ಸೆಟ್‌ಗಳ ಸುಲಭದ ಜಯ ಸಾಧಿಸಿದರು. ಇನ್ನೊಂದೆಡೆ ಫೆಡರರ್‌ ಅವರು ರಷ್ಯಾದ ಆ್ಯಂಡ್ರೆ ರುಬ್ಲೆವ್‌ ಎದುರು 3–6, 4–6ರಿಂದ ಸೋಲಿನ ಕಹಿ ಉಂಡರು. ಹಾಲಿ ಚಾಂಪಿಯನ್‌ ಜೊಕೊವಿಚ್‌ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್‌ನ ಲುಕಾಸ್‌ ಪೌಲ್ಲೆ ವಿರುದ್ಧ ಸೆಣಸಲಿರುವರು. ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಅವರು ಅನೆಟ್‌ ಕೊಂಟಾ ವೇಟ್‌ ಅವರನ್ನು 4–6, 7–5, 7–5ರಿಂದ ಮಣಿಸಿ ಎಂಟರಘಟ್ಟ ಪ್ರವೇಶಿಸಿದರು.

ಎರಡನೇ ಶ್ರೇಯಾಂಕದ ನವೊಮಿ ಒಸಾಕ 7–6, 5–7, 6–2ರಿಂದ ಶೇ ಸು ವೇಯ್‌ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಮ್ಯಾಡಿಸನ್‌ ಕೀಸ್‌ ಅವರು ಸಿಮೊನಾ ಹಲೆಪ್‌ ಅವರಿಗೆ 6–1, 3–6, 7–5ರಿಂದ ಸೋಲಿನ ರುಚಿ ತೋರಿಸಿದರು. ವೀನಸ್‌ ವಿಲಿಯಮ್ಸ್ ಅವರು ಡೊನ್ನಾ ವೆಕಿಕ್‌ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ಕಾಲಿಟ್ಟರು.

Post Comments (+)