ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಬರ್ಟನ್ಸ್‌–ಸಬಲೆಂಕಾ ಫೈನಲ್‌ ಫೈಟ್‌

Last Updated 26 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಜುಹಾಯ್‌, ಚೀನಾ: ಸೋಲಿನ ದವಡೆಯಿಂದ ಮೇಲೆದ್ದು ಜಯದ ನಗೆ ಸೂಸಿದ ನೆದರ್ಲೆಂಡ್ಸ್‌ನ ಕಿಕಿ ಬರ್ಟನ್ಸ್‌ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಎಲೈಟ್‌ ಟ್ರೋಫಿ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಸ್ಥಳೀಯ ಆಟಗಾರ್ತಿ ಜೆಂಗ್ ಸಾಯ್‌ ಸಾಯ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಬರ್ಟನ್ಸ್‌ 2–6, 6–3, 6–4ರಲ್ಲಿ ಗೆಲುವು ಸಾಧಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಬರ್ಟನ್ಸ್‌ ಮೊದಲ ಸೆಟ್‌ನಲ್ಲಿ ನೀರಸ ಸೋಲು ಕಂಡರು. ಎರಡನೇ ಸೆಟ್‌ನ ಆರಂಭದಲ್ಲಿ ಹಿನ್ನಡೆಯನ್ನೂ ಅನುಭವಿಸಿದ್ದರು. ಆದರೆ ಮುಂದಿನ 11 ಗೇಮ್‌ಗಳ ಪೈಕಿ ಒಂಬತ್ತನ್ನು ಗೆದ್ದು ಮುನ್ನಡೆದರು. ಸೆಟ್‌ ಗೆದ್ದು ಸಮಬಲ ಸಾಧಿಸಿದ ಅವರು ನಿರ್ಣಾಯಕ ಮೂರನೇ ಸೆಟ್‌ನ ಆರಂಭದಲ್ಲೇ 4–1ರಿಂದ ಮುನ್ನಡೆದರು. ಆದರೆ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಅಮೋಘ ಆಟವಾಡಿದ ಜೆಂಗ್ ಸಾಯ್‌ ಸಾಯ್‌ 4–4ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೂ ಪಟ್ಟು ಬಿಡದ ಬರ್ಟನ್ಸ್‌ ಗೆದ್ದು ಸಂಭ್ರಮಿಸಿದರು. ಎರಡೂವರೆ ತಾಸು ನಡೆದ ಪಂದ್ಯ ಪ್ರೇಕ್ಷಕರಿಗೆ ರೋಮಾಂಚನ ನೀಡಿತು.

ಸಬಲೆಂಕಾ ಜಯಭೇರಿ: ಫೈನಲ್‌ನಲ್ಲಿ ಬರ್ಟನ್ಸ್‌ ಬೆಲಾರಸ್‌ನ ಅರಿನಾ ಸಬಲೆಂಕಾ ಎದುರು ಸೆಣಸುವರು. ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ವಿರುದ್ಧದ ಸೆಮಿಫೈನಲ್‌ನಲ್ಲಿ ಸಬಲೆಂಕಾ 7–5, 7–6 (4)ರಲ್ಲಿ ಜಯಭೇರಿ ಮೊಳಗಿಸಿದರು. ಚೀನಾದಲ್ಲಿ ಒಟ್ಟು ನಾಲ್ಕು ಬಾರಿ ಪೈನಲ್‌ ಪ್ರವೇಶಿಸಿರುವ ಸಬಲೆಂಕಾ ಮೂರು ಸಲ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ಅವರು ವೃತ್ತಿ ಜೀವನದ ಒಂಬತ್ತನೇ ಮತ್ತು ಈ ಋತುವಿನ ನಾಲ್ಕನೇ ಫೈನಲ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT