ಮಂಗಳವಾರ, ಅಕ್ಟೋಬರ್ 15, 2019
26 °C

ಟೆನಿಸ್‌: ಪ್ರೀ ಕ್ವಾರ್ಟರ್‌ಗೆ ಬೋಪಣ್ಣ–ಡೆನಿಸ್‌

Published:
Updated:
Prajavani

ಶಾಂಘೈ: ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನಿಸ್‌ ಶಪೊವಲೊವ್‌ ಅವರು ಶಾಂಘೈ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಬೋಪಣ್ಣ ಮತ್ತು ಶಪೊವಲೊವ್‌ 6–1, 6–4 ನೇರ ಸೆಟ್‌ಗಳಿಂದ ರಷ್ಯಾದ ಕರೆನ್‌ ಕಚನೊವ್‌ ಮತ್ತು ಆ್ಯಂಡ್ರೆ ರುಬ್ಲೇವ್‌ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಫಿಲಿಪ್‌ ಕ್ರಾಜಿನೊವಿಚ್‌ 6–3, 3–6, 10–3ರಲ್ಲಿ ಜರ್ಮನಿಯ ಕೆವಿನ್‌ ಕ್ರಾವಿಟ್ಜ್‌ ಮತ್ತು ಆ್ಯಂಡ್ರೆಸ್‌ ಮೀಸ್‌ ವಿರುದ್ಧ ವಿಜಯಿಯಾದರು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ 6–2, 7–6ರಲ್ಲಿ ಅಲ್ಬರ್ಟ್‌ ರಾಮೊಸ್‌ ವಿನೊಲಸ್‌ ಅವರನ್ನು ಮಣಿಸಿದರು.

Post Comments (+)