ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ಆಟಗಾರರಿಗೆ ₹ 45 ಕೋಟಿ ನೆರವು

Last Updated 6 ಮೇ 2020, 17:22 IST
ಅಕ್ಷರ ಗಾತ್ರ

ಪ್ಯಾರಿಸ್‌: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಯಾವುದೇ ಟೂರ್ನಿಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಟೆನಿಸ್‌ ಆಟಗಾರರಿಗೆ ನೀಡಲು ಅಂದಾಜು ₹ 45 ಕೋಟಿ ನಿಧಿ ಸಂಗ್ರಹಿಸಿದ್ದಾಗಿ ವಿಶ್ವ ಟೆನಿಸ್‌ ಆಡಳಿತ ಮಂಡಳಿಗಳು ಹೇಳಿವೆ.

ಈ ಕುರಿತು ಎಟಿಪಿ, ಡಬ್ಲ್ಯುಟಿಎ ಟೂರ್ಸ್‌, ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಹಾಗೂ ನಾಲ್ಕು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಸಂಘಟನಾ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿವೆ. ‘ಕೋವಿಡ್‌–19 ಪಿಡುಗಿನ ಕಾರಣ ಅನಿರೀಕ್ಷಿತ ತೊಂದರೆಗಳಿಗೆ ಸಿಲುಕಿರುವ ಆಟಗಾರರಿಗೆ, ಈ ಪರಿಹಾರ ನಿಧಿ ಅನುಕೂಲವಾಗಿದೆ’ ಎಂದು ಸಂಸ್ಥೆಗಳು ಹೇಳಿವೆ.

ಜುಲೈ 13ರವರೆಗೆ ಟೂರ್ನಿಗಳು ಸ್ಥಗಿತಗೊಂಡಿವೆ. ಎಟಿಪಿ ಹಾಗೂ ಡಬ್ಲ್ಯುಟಿಎ ಸಿಂಗಲ್ಸ್‌ ಹಾಗೂ ಡಬಲ್ಸ್ ವಿಭಾಗಗಳಸುಮಾರು 800 ಆಟಗಾರರಿಗೆ ಆರ್ಥಿಕ ಬೆಂಬಲದ ಅಗತ್ಯವಿದೆ. ಆಟಗಾರರ ರ‍್ಯಾಂಕಿಂಗ್‌ ಹಾಗೂ ಗೆದ್ದ ಟೂರ್ನಿಗಳ ನಗದು ಬಹುಮಾನದ ಆಧಾರದ ಮೇಲೆ ಧನಸಹಾಯ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT