ಶನಿವಾರ, ಜೂನ್ 6, 2020
27 °C

ಟೆನಿಸ್‌ ಆಟಗಾರರಿಗೆ ₹45 ಕೋಟಿ ನೆರವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಯಾವುದೇ ಟೂರ್ನಿಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಟೆನಿಸ್‌ ಆಟಗಾರರಿಗೆ ನೀಡಲು ಅಂದಾಜು ₹ 45 ಕೋಟಿ ನಿಧಿ ಸಂಗ್ರಹಿಸಿದ್ದಾಗಿ ವಿಶ್ವ ಟೆನಿಸ್‌ ಆಡಳಿತ ಮಂಡಳಿಗಳು ಹೇಳಿವೆ.

ಈ ಕುರಿತು ಎಟಿಪಿ, ಡಬ್ಲ್ಯುಟಿಎ ಟೂರ್ಸ್‌, ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಹಾಗೂ ನಾಲ್ಕು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಸಂಘಟನಾ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿವೆ. ‘ಕೋವಿಡ್‌–19 ಪಿಡುಗಿನ ಕಾರಣ ಅನಿರೀಕ್ಷಿತ ತೊಂದರೆಗಳಿಗೆ ಸಿಲುಕಿರುವ ಆಟಗಾರರಿಗೆ, ಈ ಪರಿಹಾರ ನಿಧಿ ಅನುಕೂಲವಾಗಿದೆ’ ಎಂದು ಸಂಸ್ಥೆಗಳು ಹೇಳಿವೆ.

ಜುಲೈ 13ರವರೆಗೆ ಟೂರ್ನಿಗಳು ಸ್ಥಗಿತಗೊಂಡಿವೆ. ಎಟಿಪಿ ಹಾಗೂ ಡಬ್ಲ್ಯುಟಿಎ ಸಿಂಗಲ್ಸ್‌ ಹಾಗೂ ಡಬಲ್ಸ್ ವಿಭಾಗಗಳ ಸುಮಾರು 800 ಆಟಗಾರರಿಗೆ ಆರ್ಥಿಕ ಬೆಂಬಲದ ಅಗತ್ಯವಿದೆ. ಆಟಗಾರರ ರ‍್ಯಾಂಕಿಂಗ್‌ ಹಾಗೂ ಗೆದ್ದ ಟೂರ್ನಿಗಳ ನಗದು ಬಹುಮಾನದ ಆಧಾರದ ಮೇಲೆ ಧನಸಹಾಯ ಮಾಡಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು