‘ಬಾಲ್‌ ಬಾಯ್‌’ಗಳನ್ನು ಗೌರವಿಸಿ: ಫೆಡರರ್‌

7

‘ಬಾಲ್‌ ಬಾಯ್‌’ಗಳನ್ನು ಗೌರವಿಸಿ: ಫೆಡರರ್‌

Published:
Updated:
Deccan Herald

ಶಾಂಘೈ: ‘ಪಂದ್ಯದ ವೇಳೆ ಆಟಗಾರರಿಗೆ ಎಲ್ಲಾ ರೀತಿಯಿಂದಲೂ ನೆರವಾಗುವ ಮಕ್ಕಳನ್ನು (ಬಾಲ್‌ ಬಾಯ್‌)ಎಲ್ಲರೂ ಗೌರವಿಸಬೇಕು’ ಎಂದು ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ತಿಳಿಸಿದ್ದಾರೆ.

ಹೋದ ವಾರ ನಡೆದಿದ್ದ ಶೆಂಜೆನ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ವೇಳೆ ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ, ಬೇಗನೆ ಟವೆಲ್‌ ತಂದುಕೊಡಲಿಲ್ಲ ಎಂದು ಅಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಡುಗನ ಮೇಲೆ ರೇಗಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಫರ್ನಾಂಡೊ ವರ್ತನೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ ಫೆಡರರ್ ‘ ಪಂದ್ಯದ ವೇಳೆ ಆಟಗಾರರು ಹತಾಶರಾಗುವುದು ಸಹಜ. ಹಾಗಂತ ‘ಬಾಲ್‌ ಬಾಯ್‌’ ಮತ್ತು ಅಂಗಳದಲ್ಲಿ ಕಾರ್ಯನಿರ್ಹಿಸುವ ಸಿಬ್ಬಂದಿ ಮೇಲೆ ರೇಗಾಡುವುದು ಸರಿಯಲ್ಲ. ಅದು ಆಟಗಾರನಿಗೆ ಶೋಭೆ ತರುವುದಿಲ್ಲ. ನಾವು ಎಷ್ಟೇ ದೊಡ್ಡವರಾಗಿದ್ದರೂ ಕಿರಿಯರನ್ನು ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕು’ ಎಂದಿದ್ದಾರೆ.

ಫೆಡರರ್‌ ಕೂಡಾ ಚಿಕ್ಕವರಾಗಿದ್ದಾಗ ಟೆನಿಸ್‌ ಪಂದ್ಯಗಳ ವೇಳೆ ‘ಬಾಲ್‌ ಬಾಯ್‌’ ಆಗಿ ಕೆಲಸ ಮಾಡಿದ್ದರು.

‘ಪಂದ್ಯದ ವೇಳೆ ಕಾರ್ಯನಿರ್ವಹಿಸುವ ಮಕ್ಕಳು ನಮಗೆ ಎಲ್ಲಾ ರೀತಿಯಿಂದಲೂ ನೆರವಾಗುತ್ತಾರೆ. ಆಟಗಾರರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ನಮಗೆ ಬೇಕೆಂದಾಗ ಬಾಳೆಹಣ್ಣು, ತಂಪು ಪಾನೀಯ, ಟವೆಲ್‌ ಮತ್ತು ಐಸ್‌ ಪ್ಯಾಕ್‌ಗಳನ್ನು ತಂದುಕೊಡುತ್ತಾರೆ. ಅವರು ಭವಿಷ್ಯದ ತಾರೆಗಳು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !