ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಫಿನ್‌ಗೆ ಮಣಿದ ಬರೆಟಿನಿ

ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿ ಆಟಗಾರನಿಗೆ ಆಘಾತ
Last Updated 22 ಜೂನ್ 2019, 19:31 IST
ಅಕ್ಷರ ಗಾತ್ರ

ಹ್ಲಾಲೆ ವೆಸ್ಟ್ ಫಾಲೆನ್, ಜರ್ಮನಿ: ಇಟಲಿಯ ಸ್ಟಾರ್‌ ಆಟಗಾರ ಮ್ಯಾಟಿಯೊ ಬರೆಟಿನಿ ಎದುರು ರೋಚಕ ಪಂದ್ಯದಲ್ಲಿ ಗೆದ್ದ ಬೆಲ್ಜಿಯಂನ ಡೇವಿಡ್ ಗಫಿನ್, ಇಲ್ಲಿ ನಡೆಯತ್ತಿರುವ ಹ್ಯಾಲೆ ಓಪನ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 28 ವರ್ಷದ ಗಫಿನ್ 7–6 (7/4), 6–3ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ 2017ರ ನಂತರ ಎಟಿಪಿ ಟೂರ್ ಟೂರ್ನಿಯ ಫೈನಲ್ ತಲುಪಿ ನಿಟ್ಟುಸಿರು ಬಿಟ್ಟರು.

ಗುರುವಾರ ನಡೆದ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಸ್ಥಳೀಯ ಆಟಗಾರ ಹಾಗೂ ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನ ಹೊಂದಿರುವ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಗಫಿನ್ ಮಣಿಸಿದ್ದರು.

23 ವರ್ಷದ ಬೆರೆಟಿನಿ ಕಳೆದ ವಾರ ಮುಕ್ತಾಯಗೊಂಡಿದ್ದ ಸ್ಟಟ್‌ ಗರ್ಟ್ ಟೂರ್ನಿಯ ಫೈನಲ್‌ನಲ್ಲಿ ಗೆದ್ದು ವರ್ಷದ ಎರಡನೇ ಎಟಿಪಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧನೆ ಮಾಡಿದ್ದರು.

ಈ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನಕ್ಕೇರಿದ್ದರು.

ಹೀಗಾಗಿ ಗಫಿನ್ ವಿರುದ್ಧ ಶನಿವಾರ ವಿಶ್ವಾಸದಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ರ‍್ಯಾಂಕಿಂಗ್ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿರುವ ಬೆಲ್ಜಿಯಂ ಆಟಗಾರನ ತಂತ್ರಗಳಿಗೆ ಪ್ರತಿತಂತ್ರ ಹೂಡುವಲ್ಲಿ ವಿಫಲರಾದರು.

ಮೊದಲ ಸೆಟ್‌ನ ಆರಂಭದಲ್ಲಿ ಉಭಯ ಆಟಗಾರರು ಸಮಬಲದ ಹೋರಾಟ ಪ್ರದರ್ಶಿಸಿದರು.

ಜಿದ್ದಾಜಿ ದ್ದಿಯ ಹಣಾಹಣಿಯ ಕೊನೆಯಲ್ಲಿ ಗಫಿನ್ ಮೇಲುಗೈ ಸಾಧಿಸಿದರು. ಆದರೆ ಎರಡನೇ ಸೆಟ್ ಏಕಪಕ್ಷೀಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT