ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೇವ್‌ಲ್ಯಾಂಡ್ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಸಾನಿಯಾ–ಕ್ರಿಸ್ಟಿನಾ

Last Updated 27 ಆಗಸ್ಟ್ 2021, 13:47 IST
ಅಕ್ಷರ ಗಾತ್ರ

ಕ್ಲೇವ್‌ಲ್ಯಾಂಡ್, ಅಮೆರಿಕ: ಅಮೋಘ ಆಟವಾಡಿದ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಜೋಡಿಯು ಇಲ್ಲಿ ನಡೆಯುತ್ತಿರುವ ಲ್ಯಾಂಡ್‌ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಗುರುವಾರ ರಾತ್ರಿ ನಡೆದ ಮಹಿಳೆಯರ ಡಬಲ್ಸ್ ಎಂಟರಘಟ್ಟದ ಹಣಾಹಣಿಯಲ್ಲಿ ಈ ಜೋಡಿಯು 6-3, 6-3ರಿಂದ ಜೆಕ್‌ ಗಣರಾಜ್ಯದ ಲೂಸಿ ರಾಡೆಕಾ ಹಾಗೂ ಚೀನಾದ ಶೂಯಿ ಜಾಂಗ್ ಎದುರು ಜಯ ಸಾಧಿಸಿದರು. ಒಂದು ತಾಸು ಒಂದು ನಿಮಿಷ ಈ ಪಂದ್ಯ ನಡೆಯಿತು.

ಪಂದ್ಯದ ಒಂಬತ್ತು ಬ್ರೇಕ್‌ಪಾಯಿಂಟ್ಸ್‌ ಪೈಕಿ ಐದನ್ನು ಸಾನಿಯಾ–ಕ್ರಿಸ್ಟಿನಾ ತಮ್ಮದಾಗಿಸಿಕೊಂಡರು.

ನಾಲ್ಕರ ಘಟ್ಟದಲ್ಲಿ ಭಾರತ–ಅಮೆರಿಕ ಜೋಡಿಗೆ ನಾರ್ವೆಯ ಉಲ್‌ರಿಕ್‌ ಐಕರಿ ಮತ್ತು ಅಮೆರಿಕದ ಕ್ಯಾಥರೀನ್ ಹ್ಯಾರಿಸನ್ ಸವಾಲು ಎದುರಾಗಿದೆ.

ಎರಡನೇ ಸುತ್ತಿನ ಸೆಣಸಾಟದಲ್ಲಿಯೂ ಸಾನಿಯಾ–ಕ್ರಿಸ್ಟಿನಾ ಅವರು ಒಂದೂ ಸೆಟ್‌ ಬಿಟ್ಟುಕೊಡದೆ ಜಾರ್ಜಿಯಾದ ಒಕ್ಸಾನಾ ಮತ್ತು ರುಮೇನಿಯಾದ ಆ್ಯಂಡ್ರಿಯಾ ಮಿಟು ಎದುರು ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT