ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಇಂಡಿಯಾನ ವೆಲ್ಸ್‌ಗೆ ಶರಪೋವಾ ಇಲ್ಲ

Last Updated 14 ಫೆಬ್ರುವರಿ 2019, 16:54 IST
ಅಕ್ಷರ ಗಾತ್ರ

ಇಂಡಿಯಾನ ವೆಲ್ಸ್‌ : ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವಾ, ಮುಂದಿನ ತಿಂಗಳು ನಡೆಯುವ ಇಂಡಿಯಾನ ವೆಲ್ಸ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

‘31 ವರ್ಷ ವಯಸ್ಸಿನ ಮರಿಯಾ, ಭುಜದ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರ ಗೈರು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ’ ಎಂದು ಟೂರ್ನಿಯ ಸಂಘಟಕರು ಟ್ವೀಟ್‌ ಮಾಡಿದ್ದಾರೆ.

ಶರಪೋವಾ, ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ಜರ್ಮನಿಯ ಮೋನಾ ಬಾರ್ಥೆಲ್‌ಗೆ ಸಿಂಗಲ್ಸ್‌ ವಿಭಾಗದಲ್ಲಿ ಆಡುವ ಅವಕಾಶ ಸಿಕ್ಕಿದೆ. ಟೂರ್ನಿಯು ಮಾರ್ಚ್‌ 4ರಿಂದ 17ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT