ನಿನಾದ್‌ಗೆ ‍ಪ್ರಶಸ್ತಿ ‘ಡಬಲ್‌’

7

ನಿನಾದ್‌ಗೆ ‍ಪ್ರಶಸ್ತಿ ‘ಡಬಲ್‌’

Published:
Updated:
Deccan Herald

ಬೆಂಗಳೂರು: ಅಮೋಘ ಆಟ ಆಡಿದ ನಿನಾದ್‌ ರವಿ ಅವರು ಎಐಟಿಎ ಟಿಎಸ್‌–7 ಟೆನಿಸ್‌ ಟೂರ್ನಿಯ 16 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ರಾಜಾಜಿನಗರದ ಟೆನಿಸ್‌ ಟೆಂಪಲ್‌ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಸಿಂಗಲ್ಸ್‌ ಫೈನಲ್‌ನಲ್ಲಿ ನಿನಾದ್‌ 7-6, 7–5ರಲ್ಲಿ ಗೋವಿಂದ್‌ ಸೆಹ್ವಾಗ್‌ ಅವರನ್ನು ಸೋಲಿಸಿದರು.

ಸಿಸ್ಟರ್‌ ನಿವೇದಿತಾ ಪ್ರೌಢಶಾಲೆಯಲ್ಲಿ ಓದುತ್ತಿರುವ ನಿನಾದ್‌ ಡಬಲ್ಸ್‌ನಲ್ಲೂ ಮೋಡಿ ಮಾಡಿದರು.

ಫೈನಲ್‌ನಲ್ಲಿ ನಿನಾದ್‌ ಮತ್ತು ಗೋವಿಂದ್‌ ಸೆಹ್ವಾಗ್‌ 6–4, 6–2ರಲ್ಲಿ ಯಶಸ್‌ ಕಿರಣ್‌ ಮತ್ತು ಅಶ್ವಿನ್‌ ಮಣಿಕಂದನ್‌ ಅವರನ್ನು ಸೋಲಿಸಿದರು.

ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಆಕಾಂಕ್ಷಾ 6–2, 6–3ರಲ್ಲಿ ಉತ್ಸಾ ಕಾರ್ಲಾ ವಿರುದ್ಧ ಗೆದ್ದರು.

ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ ಚಾರ್ಮಿ ಗೋಪಿನಾಥ್‌ ಮತ್ತು ಸುರಭಿ ಶ್ರೀನಿವಾಸ್‌ 4–6, 6–1, 10–2ರಲ್ಲಿ ಆತ್ಮಿಕಾ ಮತ್ತು ಆಕಾಂಕ್ಷಾ ಅವರನ್ನು ಸೋಲಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !