ಬೆಂಗಳೂರು: ಐದನೇ ಶ್ರೇಯಾಂಕದ ಅಮೋದಿನಿ ನಾಯ್ಕ್ ಅವರು ಎಎನ್‌ಟಿ ಅಂತರರಾಷ್ಟ್ರೀಯ ಎಐಟಿಎ ಮಹಿಳೆಯರ ಒಂದು ಲಕ್ಷ ರು. ಬಹುಮಾನದ ಟೆನಿಸ್ ಟೂರ್ನಿಯ ಕಿರೀಟವನ್ನು ತಮ್ಮದಾಗಿಸಿಕೊಂಡರು.
ಶುಕ್ರವಾರ ಎಎನ್‌ಟಿ ಕೋರ್ಟ್‌ನಲ್ಲಿ ನಡೆದ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿಅಮೋದಿನಿ ನಾಯ್ಕ್, 6–0, 6–1ರಿಂದ ಶ್ರೇಯಾಂಕ ರಹಿತ ಆಟಗಾರ್ತಿ ಸಾಯಿ ಜಾನ್ವಿ ಅವರನ್ನು ಮಣಿಸಿ, ಪ್ರಶಸ್ತಿ ಪಡೆದರು. ಈ ಪಂದ್ಯ 35 ನಿಮಿಷ ನಡೆಯಿತು.