ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್ ಟೆನಿಸ್‌ ಟೂರ್ನಿ: ವೀನಸ್‌ಗೆ ಜಯದ ಆರಂಭ

ರೆಬೆಕ್ಕಾ ಪೀಟರ್ಸನ್ ಪರಾಭವ
Last Updated 29 ಜೂನ್ 2021, 14:36 IST
ಅಕ್ಷರ ಗಾತ್ರ

ಲಂಡನ್‌: ಐದು ಬಾರಿಯ ಚಾಂಪಿಯನ್‌ ವೀನಸ್ ವಿಲಿಯಮ್ಸ್ ಅವರು ವಿಂಬಲ್ಡನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿದ್ದಾರೆ. ವೈಲ್ಡ್‌ಕಾರ್ಡ್ ಪ್ರವೇಶ ಪಡೆದು ಬಂದಿರುವ ಅಮೆರಿಕದ ಆಟಗಾರ್ತಿ ಮೊದಲ ಸುತ್ತಿನಲ್ಲಿ ಮಂಗಳವಾರ 7-5, 4-6, 6-3ರಿಂದ ರುಮೇನಿಯಾದ ಮಿಹಾಲಾ ಬುಜರ್ನೆಸ್ಕ್ಯು ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ಭಾಗವಹಿಸಿರುವ ಅತ್ಯಂತ ಹಿರಿಯ ಆಟಗಾರ್ತಿ (41 ವರ್ಷ ವಯಸ್ಸು) ವೀನಸ್‌ 23ನೇ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಫೆಬ್ರುವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅವರು ಎರಡನೇ ಸುತ್ತು ಪ್ರವೇಶಿಸಿದ್ದರು. ಆ ಬಳಿಕ ಆಡಿದ ಎಲ್ಲ ಪಂದ್ಯಗಳಲ್ಲೂ ಅವರು ಸೋಲು ಅನುಭವಿಸಿದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ಮುಂದಿನ ಪಂದ್ಯದಲ್ಲಿ ಅವರು ಟ್ಯೂನಿಷಿಯಾದ ಆನ್ಸ್‌ ಜಬೆವುರ್ ಅವರನ್ನು ಎದುರಿಸುವರು.

ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಜಬೆವುರ್‌6-2, 6-1ರಿಂದ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್ ಅವರನ್ನು ಮಣಿಸಿದರು.

ಇನ್ನೊಂದು ಹಣಾಹಣಿಯಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ 7-5, 6-4ರಿಂದ ಸ್ಲೋವೇನಿಯಾದ ತಮಾರ ಜಿಡಾನ್ಸೆಕ್ ಅವರನ್ನು ಸೋಲಿಸಿದರು.

ಅಲೆಕ್ಸ್ ಡಿ ಮಿನೌರ್‌ಗೆ ಆಘಾತ: ವಿಂಬಲ್ಡನ್‌ನಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ ಅಮೆರಿಕದ ಯುವ ಆಟಗಾರ ಸೆಬಾಸ್ಟಿಯನ್ ಕೊರ್ಡಾ ಮೊದಲ ಸುತ್ತಿನಲ್ಲಿ 15ನೇ ಕ್ರಮಾಂಕದ, ಅಲೆಕ್ಸ್ ಡಿ ಮಿನೌರ್ ಅವರಿಗೆ ಆಘಾತ ನೀಡಿದರು.

20 ವರ್ಷದ ಸೆಬಾಸ್ಟಿಯನ್‌ಗೆ ಆಸ್ಟ್ರೇಲಿಯಾ ಆಟಗಾರನ ಎದುರು 6-3, 6-4, 6-7, 7-6ರಿಂದ ಜಯ ಒಲಿಯಿತು.

ಸೆಬಾಸ್ಟಿಯನ್ ಅವರ ತಂದೆ ಪೆಟರ್‌ ಕೊರ್ಡಾ ಕೂಡ ಟೆನಿಸ್ ಆಟಗಾರ ಆಗಿದ್ದರು. 1998ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು.

ಮಳೆ ಅಡ್ಡಿ: ಮಳೆಯಿಂದಾಗಿ ಸೋಮವಾರವೂ ಮೊದಲ ಸುತ್ತಿನ ಕೆಲವು ಪಂದ್ಯಗಳು ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT