ಟೆನಿಸ್‌: ಸೆಮಿಫೈನಲ್‌ಗೆ ಅಲೆಕ್ಸಾಂಡರ್‌ ಜ್ವೆರೆವ್‌

ಶನಿವಾರ, ಮಾರ್ಚ್ 23, 2019
34 °C

ಟೆನಿಸ್‌: ಸೆಮಿಫೈನಲ್‌ಗೆ ಅಲೆಕ್ಸಾಂಡರ್‌ ಜ್ವೆರೆವ್‌

Published:
Updated:
Prajavani

ಅಕಪುಲ್ಕೊ, ಮೆಕ್ಸಿಕೊ: ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಮೆಕ್ಸಿಕೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಜ್ವೆರೆವ್‌ 6–4, 6–4 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್‌ ಅವರನ್ನು ಸೋಲಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ನಿಕ್‌ ಕಿರ್ಗಿಯೊಸ್‌ 7–5, 6–7, 6–4ರಲ್ಲಿ ಸ್ಟಾನಿಸ್ಲಾಸ್‌ ವಾವ್ರಿಂಕ ಎದುರೂ, ಕ್ಯಾಮರನ್‌ ನೊರಿ 6–3, 6–2ರಲ್ಲಿ ಮೆಕೆಂಜಿ ಡೊನಾಲ್ಡೊ ಮೇಲೂ, ಜಾನ್‌ ಇಸ್ನರ್‌ 7–6, 6–7, 7–6ರಲ್ಲಿ ಜಾನ್‌ ಮಿಲ್‌ಮ್ಯಾನ್‌ ವಿರುದ್ಧವೂ ಗೆದ್ದರು.

ಸೆಮಿಗೆ ವೆಕಿಕ್‌: ಕ್ರೊವೇಷ್ಯಾದ ಡೊನ್ನಾ ವೆಕಿಕ್‌, ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಎಂಟರ ಘಟ್ಟದ ಪೈಪೋಟಿಯಲ್ಲಿ ಮೂರನೇ ಶ್ರೇಯಾಂಕಿತೆ ವೆಕಿಕ್‌ 6–3, 7–5ರಲ್ಲಿ ಜೊಹಾನ್ನ ಕೊಂಥಾ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಬಿಯಾಂಕ ಆ್ಯಂಡ್ರಿಸ್ಕು 7–6, 6–1ರಲ್ಲಿ ಜಾಂಗ್‌ ಸೈಸೈ ಮೇಲೂ, ವಾಂಗ್‌ ಯಫಾನ್‌ 6–3, 6–4ರಲ್ಲಿ ಬೀಟ್ರಿಜ್‌ ಹಡಾದ ಮಯಿಯಾ ವಿರುದ್ಧವೂ, ಸೋಫಿಯಾ ಕೆನಿನ್‌ 6–4, 4–6, 7–5ರಲ್ಲಿ ವಿಕ್ಟೋರಿಯಾ ಅಜರೆಂಕಾ ಎದುರೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !