ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಫೈನಲ್‌ನಲ್ಲಿ ರೋನಿಲ್‌–ಮೋನಿಲ್‌ ಪೈಪೋಟಿ

Last Updated 26 ಅಕ್ಟೋಬರ್ 2018, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸಹೋದರರಾದ ರೋನಿಲ್‌ ಲೋಲ್ಟಿಕರ್‌ ಮತ್ತು ಮೋನಿಲ್‌ ಲೋಲ್ಟಿಕರ್‌ ಅವರು ಟಾಪ್‌ಸ್ಪಿನ್‌ ಟೆನಿಸ್‌ ಅಕಾಡೆಮಿ ಆಶ್ರಯದ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಶುಕ್ರವಾರ ನಡೆದ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ರೋನಿಲ್‌ 6–2, 6–4ರಲ್ಲಿ ಸ್ಕಂದಾ ಎದುರು ಗೆದ್ದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಮೋನಿಲ್‌ 6–4, 6–3ರಲ್ಲಿ ಅರ್ಜುನ್‌ ಪ್ರೇಮಕುಮಾರ್‌ ಅವರನ್ನು ಮಣಿಸಿದರು.

ಡಬಲ್ಸ್‌ ವಿಭಾಗದಲ್ಲಿ ನಿನಾದ್‌ ರವಿ ಮತ್ತು ಅಶ್ವಿನ್‌ ಭಟ್‌ ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ನಿನಾದ್‌ ಮತ್ತು ಅಶ್ವಿನ್‌ 4–3, 4–2ರಲ್ಲಿ ಅರ್ಜುನ್ ಪ್ರೇಮಕುಮಾರ್‌ ಮತ್ತು ಶ್ರವಣ್‌ ಆನಂದ್‌ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT