ಸೋಮವಾರ, ಆಗಸ್ಟ್ 26, 2019
27 °C

ರ‍್ಯಾಂಕಿಂಗ್‌: ಐದನೇ ಸ್ಥಾನಕ್ಕೇರಿದ ಸಿಸಿಪಸ್‌

Published:
Updated:
Prajavani

ಪ್ಯಾರಿಸ್‌: ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್‌ ಅವರು ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿ ಬದುಕಿನ ಶ್ರೇಷ್ಠ ಸಾಧನೆಯಾಗಿದೆ.

ವಾಷಿಂಗ್ಟನ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ 20 ವರ್ಷದ ಸಿಸಿಪಸ್‌, ವಿಶ್ವ ಕ್ರಮಾಂಕಪಟ್ಟಿಯ ಅಗ್ರ 20ರೊಳಗೆ ಸ್ಥಾನ ಪಡೆದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಎಸ್ಟೋರಿಲ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಿಸಿಪಸ್‌, ಮ್ಯಾಡ್ರಿಡ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 4,045ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅಗ್ರಪಟ್ಟ ಕಾಯ್ದುಕೊಂಡಿದ್ದಾರೆ. ಸ್ಪೇನ್‌ನ ರಫೆಲ್‌ ನಡಾಲ್‌ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ರೋಜರ್‌ ಫೆಡರರ್‌ ಮತ್ತು ಡಾಮಿನಿಕ್‌ ಥೀಮ್‌ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಕೀ ನಿಶಿಕೋರಿ, ಅಲೆಕ್ಸಾಂಡರ್‌ ಜ್ವೆರೆವ್‌, ಕರೆನ್‌ ಕಚಾನೊವ್‌, ಡೇನಿಯಲ್‌ ಮೆಡ್ವೆದೇವ್‌ ಮತ್ತು ಕೆವಿನ್‌ ಆ್ಯಂಡರ್‌ಸನ್‌ ಅವರು ಕ್ರಮವಾಗಿ ಆರರಿಂದ ಹತ್ತನೇ ಸ್ಥಾನಗಳಲ್ಲಿದ್ದಾರೆ.

Post Comments (+)