ತುಮಕೂರು: ಮೊದಲ ಆರು ಮಂದಿ ಶ್ರೇಯಾಂಕ ಆಟಗಾರ್ತಿಯರು, ತುಮಕೂರು ಓಪನ್ ಐಟಿಎಫ್ ಡಬ್ಲ್ಯು 35 ಟೂರ್ನಿಯಲ್ಲಿ ಗುರುವಾರ ಸಿಂಗಲ್ಸ್ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟರು. ಆ ಮೂಲಕ ಕುತೂಹಲಕಾರಿ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ.

ಅಗ್ರ ಶ್ರೇಯಾಂಕದ ಯೂಸ್ಟಿನಾ ಮಿಕೂಲ್ಸ್ಕೀಟೆ ಪ್ರಿಕ್ವಾರ್ಟರ್ಫೈನಲ್ಪಂದ್ಯದಲ್ಲಿ ಮೊದಲ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡು 0–6, 6–3, 6–1 ರಿಂದ ಪೋಲೆಂಡ್ನ ಝುಝಾನಾ ಕೊಲೊನಸ್ ಅವರನ್ನು ಹಿಮ್ಮೆಟ್ಟಿಸಿದರು. ಮೊದಲ ಸೆಟ್ನಲ್ಲಿ ಒಂದೂ ಗೇಮ್ ಗೆಲ್ಲಲಾಗದಿದ್ದರೂ ಸಕಾಲದಲ್ಲಿ ಲಯ ಕಂಡುಕೊಂಡ ನಂತರ ಯೂಸ್ಟಿನಾ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಉಳಿದ ಪ್ರಿಕ್ವಾರ್ಟರ್ಫೈನಲ್ಪಂದ್ಯಗಳು ನೇರ ಸೆಟ್ಗಳಲ್ಲಿ ಇತ್ಯರ್ಥಗೊಂಡವು. ಎರಡನೇ ಶ್ರೇಯಾಂಕದ ಆಟಗಾರ್ತಿ ಝುಝಾನಾ ಪಾವ್ಲಿಕೊವಾಸ್ಕಾ, ಮೂರನೇ ಶ್ರೇಯಾಂಕದ ವೈದೇಹಿ ಚೌಧರಿ, ನಾಲ್ಕನೇ ಶ್ರೇಯಾಂಕದ ಝೀಲ್ ದೇಸಾಯಿ ಅವರೂ ಅಧಿಕಾರಯುತ ಗೆಲುವುಗಳೊಂದಿಗೆ ಎಂಟರ ಘಟ್ಟ ತಲುಪಿದರು. ಪೋಲೆಂಡ್ನ ಪಾವ್ಲಿಕೊವಾಸ್ಕಾ ಅವರು 16ರ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಭಾರತದ ಸೋನಾಲ್ ಪಾಟೀಲ್ ಅವರನ್ನು 6–2, 6–4 ರಿಂದ ಸೋಲಿಸಿದರು.

ಗುಜರಾತ್ನ ವೈದೇಹಿ ಪಂದ್ಯದುದ್ದಕ್ಕೂ ನಿಯಂತ್ರಣ ಸಾಧಿಸಿ 6–2, 6–2 ರಿಂದ ಸ್ವದೇಶದ ಮಧುರಿಮಾ ಸಾವಂತ್ ಅವರನ್ನು ಹಿಮ್ಮೆಟ್ಟಿಸಿದರು. ಗುಜರಾತ್ನ ಝೀಲ್ ದೇಸಾಯಿ ಅಮೋಘ ಆಟವಾಡಿ 6–2, 6–3 ರಿಂದ ಸ್ವದೇಶದ ಜೆನ್ನಿಫರ್ ಲುಯಿಖಮ್ ಅವರನ್ನು ಪರಾಭವಗೊಳಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು.

ಅರಿನಾ ಅರಿಫುಲಿನಾ, ಇಕತೆರಿನಾ ಯಶೀನಾ, ಸೇನಿಯಾ ಲೆಸ್ಕುಟೋವಾ, ಎಲಿನಾ ನೆಪ್ಲಿ ಅವರೂ ಎಂಟರ ಘಟ್ಟ ತಲುಪಿದರು. ಈ ನಾಲ್ವರೂ ರಷ್ಯಾದ ಆಟಗಾರ್ತಿಯರು.

ಐದನೇ ಶ್ರೇಯಾಂಕದ ಎಲಿನಾ 6–1, 6–1 ರಿಂದ ಭಾರತದ ಲಕ್ಷ್ಮೀಸಿರಿ ದಂಡು ಅವರನ್ನು ಹಿಮ್ಮೆಟ್ಟಿಸಿದರೆ, ಆರನೇ ಶ್ರೇಯಾಂಕದ ಇಕತೆರಿನಾ 4–0 ಯಿಂದ ಮುನ್ನಡೆ ಸಾಧಿಸಿದ್ದಾಗ ಅವರ ಎದುರಾಳಿ ಕಾಶಿಶ್ ಭಾಟಿಯಾ ಪಂದ್ಯ ಬಿಟ್ಟುಕೊಟ್ಟರು.

ಅರಿಫುಲಿನಾ ಮತ್ತು ಲೆಸ್ಕುಟೋವಾ ಅವರು ಮಾತ್ರ ಎಂಟರ ಘಟ್ಟ ತಲುಪಿದ ಶ್ರೇಯಾಂಕರಹಿತ ಆಟಗಾರ್ತಿಯರಾಗಿದ್ದಾರೆ. ಅರಿಫುಲಿನಾ 6–4, 6–2 ರಿಂದ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ಪೂಜಾ ಇಂಗ್ಳೆ ವಿರುದ್ಧ ಜಯಗಳಿಸಿದರೆ, ಲೆಸ್ಕುಟೋವಾ 6–4, 6–2 ರಿಂದ ಭಾರತದ ಸಂದೀಪ್ತಿ ಸಿಂಗ್ ರಾವ್ ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-413944722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.