ತುಮಕೂರು: ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿಯರು, ಮಂಗಳವಾರ ಆರಂಭವಾದ ‘ತುಮಕೂರು ಓಪನ್’ ಐಟಿಎಫ್ ಡಬ್ಲ್ಯು 35 ವಿಶ್ವ ಮಹಿಳಾ ಟೆನಿಸ್ ಟೂರ್ನಿಯ ಎರಡನೇ ಸುತ್ತನ್ನು ತಲುಪಿದರು.

ಇಲ್ಲಿನ ವಿಶ್ವವಿದ್ಯಾಲಯ ಆವರಣದ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ಟೂರ್ನಿಯ ಸಿಂಗಲ್ಸ್ನಲ್ಲಿ ಮಧುರಿಮಾ ಸಾವಂತ್ ಮೊದಲ ಸುತ್ತಿನಲ್ಲಿ 6–3, 3–6, 6–1 ರಿಂದ ರಷ್ಯಾದ ಮಾರಿಯಾ ಮಿಖೈಲೋವಾ ಅವರನ್ನು ಸೋಲಿಸಿದರು.

ಭಾರತದ ಆಟಗಾರ್ತಿಯರ ವ್ಯವಹಾರವಾಗಿದ್ದ ಇತರ ಪಂದ್ಯಗಳಲ್ಲಿ ಸಂದೀಪ್ತಿ ಸಿಂಗ್ ರಾವ್ 6-3, 6-4 ರಲ್ಲಿ ನೇರ ಸೆಟ್ಗಳಿಂದ ಯಶಸ್ವಿನಿ ಅವರನ್ನು ಹಿಮ್ಮೆಟ್ಟಿಸಿದರೆ, ಪೂಜಾ ಇಂಗಳೆ ಉತ್ತಮ ಹೋರಾಟದ ನಂತರ 7–5, 1–6, 6–4 ರಿಂದ ಡ್ಯಾನಿಕಾ ಫೆರ್ನಾಂಡೊ ಅವರನ್ನು ಪರಾಭವಗೊಳಿಸಿದರು.

ಕರ್ನಾಟಕದ ಸ್ನಿಗ್ಧಾ ಕಾಂತಾ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಸೋನಲ್ ಪಾಟೀಲ 6-0, 6-3ರಿಂದ ಸ್ನಿಗ್ಧಾ ವಿರುದ್ಧ ಗೆಲುವಿಗೆ ಅಷ್ಟೇನೂ ಕಷ್ಟಪಡಲಿಲ್ಲ. ರಷ್ಯಾದ ಎಲಿನಾ ನೆಪ್ಲಿ ಅವರು 6–4, 6–1 ರಿಂದ ಕರ್ನಾಟಕದ ಇನ್ನೊಬ್ಬ ಆಟಗಾರ್ತಿ ಹರ್ಷಿಣಿ ನಾಗರಾಜ್ ವಿರುದ್ಧ 6-4, 6-1 ಜಯಗಳಿಸಿದರು. ರಷ್ಯಾದ ಸೇನಿಯಾ ಲಸ್ಕುಟೋವಾ 6–3, 7–6 (2) ರಿಂದ ಜಪಾನ್ನ ಮಿಚಿಕಾ ಒಜೆಕಿ ವಿರುದ್ಧ ಗೆಲುವು ಪಡೆದರು.

ಡಬಲ್ಸ್ನಲ್ಲೂ ಭಾರತದ ಆಟಗಾರ್ತಿಯರು ಗಮನ ಸೆಳೆದರು. ವೈದೇಹಿ ಚೌಧರಿ– ಝುಝನಾ ಪಾವ್ಲಿಕೋವಾಸ್ಕಾ (ಪೋಲೆಂಡ್) ಜೋಡಿ 6–1, 6–2 ರಿಂದ ಮಾರಿಯಾ ಮಿಖೈಲೋವಾ– ಸಂದೀಪ್ತಿ ಸಿಂಗ್ ಜೋಡಿಯನ್ನು ಸೋಲಿಸಿತು. ಐಶ್ವರ್ಯ ಜಾಧವ್– ಆಕೃತಿ ನಾರಾಯಣ್ ಜೋಡಿ 6–4, 7–5 ರಿಂದ ಅರಿನಾ ಅರಿಫುಲಿನಾ– ಎಕಟೆರಿನಾ ಯಾಶಿನಾ ಜೋಡಿಯನ್ನು 6-4, 7-5 ರಿಂದ ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಶ್ರಾವ್ಯಾ ಶಿವಾನಿ ಚಿಲಕಲಪುಡಿ– ಜೀಲ್ ದೇಸಾಯಿ ಜೋಡಿ 6–0, 6–2 ರಿಂದ ಯಶಸ್ವಿನಿ ಪನ್ವಾರ್ ಮತ್ತು ಬೇಲಾ ತಮವಿರುದ್ಧ 6-0, 6-2 ಅಂತರದಲ್ಲಿ ಜಯ ಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-91002505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.