ತುಮಕೂರು: ಭಾರತದ ಉದಯೋನ್ಮುಖ ತಾರೆ ಆಕಾಂಕ್ಷಾ ದಿಲೀಪ್ ನಿಟ್ಟೂರೆ ಅವರು ‘ತುಮಕೂರು ಓಪನ್’ ಐಟಿಎಫ್ ಡಬ್ಲ್ಯು 35 ವಿಶ್ವ ಮಹಿಳಾ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಇಲ್ಲಿನ ವಿಶ್ವವಿದ್ಯಾಲಯ ಆವರಣದ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಬುಧವಾರ ಸಿಂಗಲ್ಸ್ನ 32ರ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅರಿನಾ ಅರಿಫುಲಿನಾ 6-1, 6-1ರಿಂದ ಎಂಟನೇ ಶ್ರೇಯಾಂಕದ ಆಕಾಂಕ್ಷಾ ಅವರಿಗೆ ಆಘಾತ ನೀಡಿದರು. ಶ್ರೇಯಾಂಕರಹಿತ ಅರಿನಾ ಅವರಿಗೆ 23 ವರ್ಷ ವಯಸ್ಸಿನ ಆಕಾಂಕ್ಷಾ ಯಾವುದೇ ಹಂತದಲ್ಲಿ ಸಾಟಿಯಾಗಲಿಲ್ಲ.

ಭಾರತದ ಲಕ್ಷ್ಮಿಸಿರಿ ದಂಡು 1-6, 7-5, 6-3 ಸೆಟ್ಗಳಿಂದ ಸ್ವದೇಶದ ಪ್ರತ್ಯುಷ ರಾಚಪುಡಿ ಅವರನ್ನು ಮಣಿಸಿದರು. ಕ್ವಾಲಿಫೈಯರ್ ಆಟಗಾರ್ತಿ ಲಕ್ಷ್ಮಿಸಿರಿ ಆರಂಭಿಕ ಸೆಟ್ನ ಹಿನ್ನಡೆಯಿಂದ ಚೇತರಿಸಿಕೊಂಡು ಪ್ರಿ ಕ್ವಾರ್ಟರ್ ಫೈನಲ್ಗೆ ಮುನ್ನಡೆದರು.

ಮತ್ತೊಂದು ಕ್ವಾಲಿಫೈಯರ್ ಆಟಗಾರ್ತಿ ಕಶಿಶ್ ಭಾಟಿಯಾ 6-1, 6-1 ಸೆಟ್ಗಳಿಂದ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಅಮೋದಿನಿ ನಾಯಕ್ ವಿರುದ್ಧ ಗೆಲುವು ದಾಖಲಿಸಿದರು. ವೈಲ್ಡ್ ಕಾರ್ಡ್ ಸ್ಪರ್ಧಿ ಜೆನ್ನಿಫರ್ ಲುಯಿಖಾಮ್ 6-3, 4-6, 6-3ರಿಂದ ಚೆವಿಕಾ ರೆಡ್ಡಿ ಸಮಾ ಅವರಿಗೆ ಸೋಲುಣಿಸಿದರು.

ಮೂರನೇ ಶ್ರೇಯಾಂಕದ ವೈದೇಹಿ ಚೌಧರಿ 6-3, 6-4 ಸೆಟ್ಗಳಿಂದ ಸ್ಥಳೀಯ ತಾರೆ ಸೋಹಾ ಸಾದಿಕ್ ಅವರನ್ನು ಸೋಲಿಸಿದರು. ನಾಲ್ಕನೇ ಶ್ರೇಯಾಂಕದ ಝೀಲ್ ದೇಸಾಯಿ 6-0, 6-0 ರಿಂದ ಜೀತೇಶ್ ಕುಮಾರಿ ವಿರುದ್ಧ ಜಯ ಗಳಿಸಿದರು.

ಅಗ್ರ ಶ್ರೇಯಾಂಕದ ಜಸ್ಟಿನಾ ಮಿಕುಲ್ಸ್ಕೈಟ್ (ಲಿಥುವೇನಿಯಾ) 6–1, 6–1ರಿಂದ ಭಾರತದ ಸೌಮ್ಯಾ ವಿಗ್ ವಿರುದ್ಧ ಗೆಲುವು ದಾಖಲಿಸಿದರು. ಎರಡನೇ ಶ್ರೇಯಾಂಕದ ಜುಝಾನ್ನಾ ಪಾವ್ಲಿಕೊವ್ಸ್ಕಾ (ಪೋಲೆಂಡ್) 6–0, 6–1ರಿಂದ ಶ್ರೀಮಾನ್ಯಾ ರೆಡ್ಡಿ ಅನುಗೊಂಡ ಅವರನ್ನು ಸೋಲಿಸಿದರು. ರಷ್ಯಾದ ಎಕಟೆರಿನಾ ಯಾಶಿನಾ 6-2, 6-2ರಿಂದ ಬೇಲಾ ತಮಣಕರ್ ಅವರನ್ನು ಮಣಿಸಿದರು. ಪೋಲೆಂಡ್ನ ಜುಝಾನ್ನಾ ಕೊಲೊನಸ್ 6–2, 6–0ರಿಂದ ಐಶ್ವರ್ಯಾ ಜಾಧವ್ ಎದುರು ಗೆದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1840138265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.