ತುಮಕೂರು: ‘ತುಮಕೂರು ಓಪನ್’ ಐಟಿಎಫ್ ಡಬ್ಲ್ಯು35 ಮಹಿಳಾ ವಿಶ್ವ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಕರ್ನಾಟಕದ ಸ್ನಿಗ್ಧಾ ಕಾಂತಾ ಮುಖ್ಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ನಗರದ ವಿಶ್ವವಿದ್ಯಾಲಯ ಆವರಣದ ಟೆನಿಸ್ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಅರ್ಹತಾ ಸುತ್ತಿನ ಪಂದ್ಯಗಳಿಗೆ ತೆರೆ ಬಿತ್ತು. ಮಂಗಳವಾರ ಬೆಳಗ್ಗೆಯಿಂದ ಮುಖ್ಯ ಸುತ್ತಿನ ಪಂದ್ಯ ನಡೆಯಲಿವೆ.

ಅರ್ಹತಾ ಸುತ್ತಿನಲ್ಲಿ ವನ್ಶಿತಾ ಪಠಾಣಿಯಾ ವಿರುದ್ಧ ಸ್ನಿಗ್ಧಾ ಆರಂಭಿಕ ಸೆಟ್ನಲ್ಲಿ 6–2 ಮುನ್ನಡೆ ಸಾಧಿಸಿದರು. ಪಠಾಣಿಯಾ ಪಂದ್ಯದ ಮಧ್ಯೆ ಗಾಯಗೊಂಡು ಅಂಕಣದಿಂದ ಹೊರ ನಡೆದರು.

ಲಕ್ಷ್ಮಿಸಿರಿ ದಂಡು 6–3, 6–2 ಸೆಟ್ಗಳಿಂದ ಶ್ರೀಣಿತಿ ಚೌಧರಿ ಅವರನ್ನು ಸೋಲಿಸಿದರು. ಬೇಲಾ ತಮ್ಮಂಕರ್ 6–4, 6–3 ಸೆಟ್ಗಳಿಂದ ಲಕ್ಷ್ಮಿಗೌಡ ಅವರನ್ನು ಮಣಿಸಿದರು.

ಡ್ಯಾನಿಕಾ ಫರ್ನಾಂಡೊ 5–7, 6–0, 10–6 ಸೆಟ್ಗಳಿಂದ ಸಾಹಿರಾ ಸಿಂಗ್ ವಿರುದ್ಧ ಗೆಲುವು ದಾಖಲಿಸಿದರು. ಶ್ರೀಮ್ಯಾನ್ಯ ರೆಡ್ಡಿ ಅನುಗೊಂಡ 0–6, 6–4, 10–4 ಸೆಟ್ಗಳಿಂದ ಸೈಲಿ ಪ್ರಶಾಂತ್ ಕುಮಾರ್ ಠಕ್ಕರ್ ವಿರುದ್ಧ ಜಯ ಸಾಧಿಸಿದರು.

ಚೆವಿಕಾ ರೆಡ್ಡಿ ಸಮಾ 6–3, 7–5ರಿಂದ ಆಕೃತಿ ಸೊಂಕುಸಾರೆ ನಾರಾಯಣ್ ಅವರನ್ನು ಸೋಲಿಸಿದರು. ಕಾಶಿಶ್ ಬಾಟಿಯಾ 6–2, 6–3ರಿಂದ ಜಿತೇಶ್ ಕುಮಾರಿ ವಿರುದ್ಧ ಗೆಲುವು ಪಡೆದರು. ಐಶ್ವರ್ಯ ಚೌಧರಿ 6–3, 6–4 ಸೆಟ್ಗಳಿಂದ ಆಹಾನ್ ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-18-1227075119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.