ತುಮಕೂರು: ಕಳೆದ ಒಂದು ವಾರದಿಂದ ನಡೆಯುತ್ತಿದ್ದ ‘ತುಮಕೂರು ಓಪನ್’ ಐಟಿಎಫ್ 35 ಡಬ್ಲ್ಯು ಟೂರ್ನಿಗೆ ಭಾನುವಾರ ತೆರೆ ಬಿತ್ತು.

ವಿಶ್ವವಿದ್ಯಾಲಯ ಆವರಣದ ಟೆನಿಸ್ ಕ್ರೀಡಾಂಗಣದಲ್ಲಿ ಮೇ 3ರಂದು ಪಂದ್ಯಾವಳಿಗೆ ಚಾಲನೆ ನೀಡಲಾಗಿತ್ತು. ಸಿಂಗಲ್ಸ್, ಡಬಲ್ಸ್ ವಿಭಾಗದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಪ್ರಾರಂಭದ ಎರಡು ದಿನ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದವು. ಮೇ 5ರಿಂದ ಮುಖ್ಯ ಸುತ್ತಿನ ಪಂದ್ಯಗಳಿಗೆ ಅಂಕಣ ಸಿದ್ಧ ಪಡಿಸಲಾಗಿತ್ತು.

ರಷ್ಯಾ, ಪೋಲೆಂಡ್, ಜಪಾನ್, ಲಿಥುವೇನಿಯಾ ಸೇರಿ ಇತರೆ ರಾಷ್ಟ್ರಗಳ ಅಗ್ರ ಶ್ರೇಯಾಂಕಿತ ಆಟಗಾರ್ತಿಯರು ಕ್ರೀಡಾ ಆಸಕ್ತರಿಗೆ ರಸದೌತಣ ನೀಡಿದರು. ಭಾರತದ ಟೆನಿಸ್ ಪಟುಗಳು ಮಿಂಚಿದರು. ದೇಶದ ತಾರೆಗಳಾದ ವೈದೇಹಿ ಚೌಧರಿ, ಝೀಲ್ ದೇಸಾಯಿ, ಸ್ಥಳೀಯ ಪ್ರತಿಭೆಗಳಾದ ಜಿ.ಡಿ.ಮೇಘನಾ, ಸೋಹಾ ಸಾದಿಕ್ ಪಾಲ್ಗೊಂಡಿದ್ದರು. ವೈದೇಹಿ ಮತ್ತು ಝೀಲ್ ಸೆಮಿಫೈನಲ್ನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಫೈನಲ್ ತಲುಪುವ ಹಂತದಲ್ಲಿ ಎಡವಿದ್ದರು. ಮೇಘನಾ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದರು.

ಆಟಗಾರ್ತಿಯರು ಟೂರ್ನಿಯುದ್ದಕ್ಕೂ ಗಾಯದ ಸಮಸ್ಯೆಯಿಂದ ಬಳಲಿದರು. ಡಬಲ್ಸ್ ಫೈನಲ್ ಪಂದ್ಯಕ್ಕೂ ಮುನ್ನ ಪೋಲೆಂಡ್ನ ಝುಝಾನ ಪಾವ್ಲಿಕೋವಾಸ್ಕಾ ಭುಜದ ಗಾಯದಿಂದ ಅಂಕಣಕ್ಕೆ ಇಳಿಯಲಿಲ್ಲ. ಇದರಿಂದ ಪಂದ್ಯ ನಡೆಯಲೇ ಇಲ್ಲ. ಸೇನಿಯಾ ಲೆಸ್ಕುಟೋವಾ– ಎಲಿನಾ ನೆಪ್ಲಿ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಝೀಲ್ ದೇಸಾಯಿ ಸ್ನಾಯು ಸೆಳೆತದಿಂದಾಗಿ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದ್ದರು. ಫೈನಲ್ ಪಂದ್ಯದಲ್ಲೂ ಇದು ಮರು ಕಳಿಸಿತು. ಗಾಯದ ಸಮಸ್ಯೆ ಎದುರಿಸುತ್ತಿದ್ದ ಝುಝಾನ ಅವರಿಗೆ ಅಂತಿಮ ಪಂದ್ಯದಲ್ಲಿ ಮುಂದುವರಿಯಲು ಆಗಲಿಲ್ಲ. ಪಂದ್ಯ ಆರಂಭದಲ್ಲಿಯೇ ಅಂಕಣದಿಂದ ಹೊರ ನಡೆದರು. ತಮ್ಮ ಎದುರಾಳಿ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕೈಟ್ ಚಾಂಪಿಯನ್ ಕಿರೀಟ ಅಲಂಕರಿಸಿದರು. ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ನಿರಾಸೆಯಿಂದ ಹಿಂದಿರುಗಿದರು.

2003ರಲ್ಲಿ ಇದೇ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಟೂರ್ನಿ ಆಯೋಜಿಸಲಾಗಿತ್ತು. 23 ವರ್ಷಗಳ ಬಳಿಕ ಮತ್ತೊಮ್ಮೆ ಕ್ರೀಡಾಕೂಟ ನಡೆಯಿತು. ಇದಕ್ಕೆ ಕ್ರೀಡಾ ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೆಚ್ಚಿನ ಜನ ಆಗಮಿಸಿ ಪಂದ್ಯಗಳನ್ನು ವೀಕ್ಷಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-17-295655502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.