ತುಮಕೂರು: ರಾಜ್ಯದ ಶ್ರೀಣಿತಿ ಚೌಧರಿ ಮತ್ತು ಸ್ನಿಗ್ಧಾ ಕಾಂತಾ ಅವರು ಭಾನುವಾರ ‘ತುಮಕೂರು ಓಪನ್’ ಐಟಿಎಫ್ಡಬ್ಲ್ಯು 35 ಮಹಿಳಾ ವಿಶ್ವ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಇಲ್ಲಿನ ವಿಶ್ವವಿದ್ಯಾಲಯ ಆವರಣದ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೀಣಿತಿ 4–6, 7–5, 10–6 ರಿಂದ ನೆಮ್ಹಾ ಸಾರಾ ಕಿಸ್ಪೊಟ್ಟಾ ಅವರನ್ನು ಮಣಿಸಿ, ಎರಡನೇ ಸುತ್ತು ಪ್ರವೇಶಿಸಿದರು.

ಮತ್ತೊಂದು ಪಂದ್ಯದಲ್ಲಿ ಸ್ನಿಗ್ಧಾ 6–3, 3–6, 10–7ರಿಂದ ಪಾರ್ಥಸಾರಥಿ ಅರುಣ್ ಮುಂಡೆ ವಿರುದ್ಧ ಗೆಲುವು ದಾಖಲಿಸಿದರು.

ಆಕೃತಿ ಸೊಂಕುಸಾರೆ ನಾರಾಯಣ್ 7–6 (7), 6–4 ಸೆಟ್ಗಳಿಂದ ದಿವಾ ಭಾಟಿಯಾ ಅವರಿಗೆ ಸೋಲುಣಿಸಿದರು. ಲಕ್ಷ್ಮೀಗೌಡ 6–1, 6–2ರಿಂದ ಕೋಮಲ್ ನಗರೆ ಅವರನ್ನು ಮಣಿಸಿದರು.

ಜಿತೇಶ್ ಕುಮಾರಿ ಅವರು ವಿಧಿ ಜಾನಿ ವಿರುದ್ಧ 6–7 (7), 6–3, 10–6ರಿಂದ ಗೆದ್ದರು. ಐಶ್ವರ್ಯಾ ಜಾಧವ್ ಅವರು ಜಿ.ಡಿ.ಮೇಘನಾ ಅವರಿಗೆ 6–4, 6–3ರಿಂದ ಸೋಲುಣಿಸಿದರು. ಡ್ಯಾನಿಕಾ ಫರ್ನಾಂಡೊ ಮತ್ತು ಸೈಲಿ ಪ್ರಶಾಂತ್ ಕುಮಾರ್ ಠಕ್ಕರ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-225551105

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.