ತುಮಕೂರು: ಭಾರತದ ಆಟಗಾರ್ತಿಯರಾದ ವೈದೇಹಿ ಚೌಧರಿ ಮತ್ತು ಝೀಲ್ ದೇಸಾಯಿ ಅವರು ಶುಕ್ರವಾರ ‘ತುಮಕೂರು ಓಪನ್’ ಐಟಿಎಫ್ ಡಬ್ಲ್ಯು 35 ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆ ಹಾಕಿದರು.

ನಗರದ ವಿಶ್ವವಿದ್ಯಾಲಯದ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ವೈದೇಹಿ 6–4, 6–7 (5), 7–5 ಅಂತರದಿಂದ ಆರನೇ ಶ್ರೇಯಾಂಕದ ಇಕತೆರಿನಾ ಯಶೀನಾ (ರಷ್ಯಾ) ಅವರನ್ನು ಹಿಮ್ಮೆಟ್ಟಿಸಿದರು

ನಾಲ್ಕನೇ ಶ್ರೇಯಾಂಕದ ಝೀಲ್ 4–6, 6–3, 7–5ರ ಅಂತರದಲ್ಲಿ ಪೋಲೆಂಡ್ನ ಅರಿನಾ ಅರಿಫುಲಿನಾ ವಿರುದ್ಧ ಗೆಲುವು ದಾಖಲಿಸಿದರು. ಐದನೇ ಶ್ರೇಯಾಂಕದ ಅರಿನಾ ಮೊದಲ ಸೆಟ್ನಲ್ಲಿ ಮೇಲುಗೈ ಸಾಧಿಸಿದ್ದರು. ನಂತರ ಪುಟಿದೆದ್ದ ಗುಜರಾತ್ನ ಝೀಲ್ ಮುಂದಿನ ಎರಡೂ ಸೆಟ್ಗಳನ್ನು ವಶ ಮಾಡಿಕೊಂಡರು.

ಅಗ್ರ ಶ್ರೇಯಾಂಕಿತ ಯೂಸ್ಟಿನಾ ಮಿಕೂಲ್ಸ್ಕೀಟೆ (ಲಿಥುವೇನಿಯಾ) 5-7, 6-0, 6-2ರಿಂದ ಸೇನಿಯಾ ಲೆಸ್ಕುಟೋವಾ ವಿರುದ್ಧ ಜಯ ಗಳಿಸಿ, ನಾಲ್ಕರ ಘಟ್ಟ ಪ್ರವೇಶಿಸಿದರು. ಅವರಿಗೆ ಮುಂದಿನ ಸುತ್ತಿನಲ್ಲಿ ವೈದೇಹಿ ಎದುರಾಳಿಯಾಗಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಪೋಲೆಂಡ್ನ ಝುಝಾನ ಪಾವ್ಲಿಕೊವಾಸ್ಕಾ 1–6, 7–5, 3–0 ಅಂಕ ಗಳಿಸಿದ್ದಾಗ ಎದುರಾಳಿ ಆಟಗಾರ್ತಿ ಎಲಿನಾ ನೆಪ್ಲಿ ಗಾಯಗೊಂಡು ಅಂಕಣದಿಂದ ಹೊರ ನಡೆದರು. ಝುಝಾನ ಅವರು ಸೆಮಿಫೈನಲ್ನಲ್ಲಿ ಝೀಲ್ ಅವರನ್ನು ಎದುರಿಸುವರು.

ಡಬಲ್ಸ್ ಫೈನಲ್ ಇಂದು: ಭಾರತದ ವೈದೇಹಿ ಚೌಧರಿ ಮತ್ತು ಝುಝಾನ ಪಾವ್ಲಿಕೊವಾಸ್ಕಾ ಜೋಡಿಯು 6–1, 6–2 ಸೆಟ್ಗಳಿಂದ ಆಕಾಂಕ್ಷಾ ದಿಲೀಪ್ ನಿಟ್ಟುರೆ (ಭಾರತ), ಮಿಚಿಕಾ ಒಝೆಕಿ (ಜಪಾನ್) ಅವರನ್ನು ಸೋಲಿಸಿ ಡಬಲ್ಸ್ನಲ್ಲಿ ಫೈನಲ್ ಪ್ರವೇಶಿಸಿತು.

ಮತ್ತೊಂದು ಸೆಮಿಫೈನಲ್ನಲ್ಲಿ ಸೇನಿಯಾ ಲೆಸ್ಕುಟೋವಾ– ಎಲಿನಾ ನೆಪ್ಲಿ ಜೋಡಿಯು 6–1, 6–2ರಿಂದ ನೇರ ಸೆಟ್ಗಳಲ್ಲಿ ಭಾರತದ ಶ್ರಾವ್ಯಾ ಶಿವಾನಿ ಚಿಕಲಪುಡಿ ಮತ್ತು ಝೀಲ್ ಅವರನ್ನು ಸೋಲಿಸಿತು. ಶನಿವಾರ ಫೈನಲ್ ಹಣಾಹಣಿ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-43-1762668051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.