ಶುಕ್ರವಾರ, ಜೂನ್ 18, 2021
27 °C

ಟೆನಿಸ್‌: ಸೆರೆನಾ ವಿಲಿಯಮ್ಸ್‌ಗೆ ಸೋಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪರ್ಮಾ, ಇಟಲಿ: ಅಮೆರಿಕದ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಪರ್ಮಾ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಅವರನ್ನು ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವ 7-6, 6-2ರಲ್ಲಿ ಮಣಿಸಿದರು.

ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ಅಗ್ರ ಪಟ್ಟ ಅಲಂಕರಿಸಿದ್ದ ಸೆರೆನಾ ಈಗ ಎಂಟನೇ ಸ್ಥಾನದಲ್ಲಿದ್ದಾರೆ. 39 ವರ್ಷದ ಅವರು ಇಟಾಲಿಯನ್ ಓಪನ್ ಟೂರ್ನಿಯಲ್ಲೂ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಪರ್ಮಾ ಟೂರ್ನಿಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು. 

ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಯುವ ಆಟಗಾರ್ತಿ ಲಿಸಾ ಪಿಗಾಟೊ ವಿರುದ್ಧ ಸುಲಭ ಜಯ ಗಳಿಸಿದ್ದರು. ಆದರೆ ಕ್ಯಾಥರಿನಾ ತಂತ್ರಗಳಿಗೆ ಪ್ರತಿತಂತ್ರ ಹೂಡುವಲ್ಲಿ ವಿಫಲರಾದರು. ಪಂದ್ಯದಲ್ಲಿ ಐದು ಏಸ್ ಸಿಡಿಸಿ ಮಿಂಚಿದರೂ ಎದುರಾಳಿ ಎದೆಗುಂದಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು