ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌: ಜೊಕೊವಿಚ್–ಫೆಡರರ್‌ ಫೈನಲ್ ಹಣಾಹಣಿ?

Last Updated 25 ಜೂನ್ 2021, 19:45 IST
ಅಕ್ಷರ ಗಾತ್ರ

ಲಂಡನ್‌ : ಈ ಬಾರಿಯ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಡ್ರಾ ಶುಕ್ರವಾರ ಪ್ರಕಟವಾಗಿದ್ದು, ಪ್ರಮುಖ ಆಟಗಾರರಾದ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ಅವರು ಫೈನಲ್ ಪಂದ್ಯದಲ್ಲಿ ಮಾತ್ರ ಮುಖಾಮುಖಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಹೀಗಾದರೆ ಅದು 2019ರ ಆವೃತ್ತಿಯ ದೀರ್ಘ ಫೈನಲ್‌ನ ಮರುಸೃಷ್ಟಿ ಎನಿಸಿಕೊಳ್ಳಬಹುದು.

ಈ ಗ್ರಾಸ್‌ಕೋರ್ಟ್‌ ಟೂರ್ನಿಯು ಹೋದ ವರ್ಷ ಕೋವಿಡ್‌ನಿಂದಾಗಿ ರದ್ದಾಗಿತ್ತು. ಈ ಬಾರಿಯ ಪುರುಷರ ಸಿಂಗಲ್ಸ್ ಡ್ರಾನಲ್ಲಿ ಸ್ವಿಟ್ಜರ್ಲೆಂಡ್‌ನ ಫೆಡರರ್‌ ಮತ್ತು ಸರ್ಬಿಯಾದ ಜೊಕೊವಿಚ್‌ ಪರಸ್ಪರ ವಿರುದ್ಧ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

ಸೋಮವಾರದಿಂದ ಟೂರ್ನಿ ನಡೆ ಯಲಿದೆ. ಅಗ್ರ ಶ್ರೇಯಾಂಕದ ಜೊಕೊವಿಚ್‌ ಇಲ್ಲಿ 20ನೇ ಗ್ರ್ಯಾನ್‌ಸ್ಲಾಮ್‌ಗೆ ಪ್ರಯತ್ನಿಸಲಿದ್ದಾರೆ. ಫೆಡರರ್‌ ಮತ್ತು ಸ್ಪೇನ್‌ನ ರಫೆಲ್ ನಡಾಲ್ ತಲಾ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳಿಗೆ ಮುತ್ತಿಕ್ಕಿದ್ದಾರೆ.

ಬಾರಿಯ ವಿಂಬಲ್ಡನ್ ಟೂರ್ನಿ ಯಿಂದ ನಡಾಲ್ ಹಾಗೂ ನವೊಮಿ ಒಸಾಕ ಈಗಾಗಲೇ ಹಿಂದೆ ಸರಿದಿದ್ದಾರೆ.

ಹಲೆಪ್ ಅಲಭ್ಯ: ಮೀನಖಂಡದ ಗಾಯದಿಂದಾಗಿ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌ ಶುಕ್ರವಾರ ತಿಳಿಸಿದ್ದಾರೆ. ಅವರು ಈ ಕೂಟದ ಮಹಿಳಾ ಸಿಂಗಲ್ಸ್‌ ಹಾಲಿ ಚಾಂಪಿಯನ್‌ ಆಗಿದ್ದಾರೆ.

ಮುಖ್ಯ ಸುತ್ತಿಗೆ ಜಾಂಗ್ ಜಿಜೇನ್‌: ಜಾಂಗ್ ಜಿಜೇನ್‌ ಅವರು ಟೂರ್ನಿಯ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ. ವಿಂಬಲ್ಡನ್‌ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಚೀನಾದ ಮೊದಲ ಆಟಗಾರ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT