ಗುರುವಾರ , ಜೂನ್ 17, 2021
22 °C

ಅಮೆರಿಕ ಓಪನ್‌ನಿಂದ ಹಿಂದೆ ಸರಿದ ಹಲೆಪ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌ : ವಿಂಬಲ್ಡನ್‌ ಚಾಂಪಿಯನ್‌ ಸಿಮೊನಾ ಹಲೆಪ್‌ ಅವರು ಅಮೆರಿಕ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರುಮೇನಿಯಾ ಆಟಗಾರ್ತಿ, ಭಾನುವಾರ ಪ್ರಾಗ್‌ನಲ್ಲಿ‌ ಮುಕ್ತಾಯಗೊಂಡ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.

‘ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ಅಮೆರಿಕ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದೇನೆ‘ ಎಂದು ಹಲೆಪ್‌ ಟ್ವೀಟ್‌ ಮಾಡಿದ್ದಾರೆ.

‘ಆರೋಗ್ಯವನ್ನು ಮೊದಲ ಆದ್ಯತೆಯಾಗಿಟ್ಟುಕೊಂಡು, ಯುರೋಪ್‌ನಲ್ಲಿ ತರಬೇತಿಯನ್ನು ಮುಂದುವರಿಸುತ್ತೇನೆ‘ ಎಂದೂ ಅವರು ಹೇಳಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಅಗ್ರ ಎಂಟು ಆಟಗಾರ್ತಿಯರ ಪೈಕಿ ಇದುವರೆಗೆ ಆರು ಮಂದಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮೊದಲ ಕ್ರಮಾಂಕದ ಆ್ಯಷ್‌ ಬಾರ್ಟಿ ಹಾಗೂ ಹಾಲಿ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕ್ಯೂ ಇವರಲ್ಲಿ ಸೇರಿದ್ದಾರೆ.

‘ಟೂರ್ನಿಯನ್ನು ಸುರಕ್ಷಿತ ವಾತಾವರಣದಲ್ಲಿ ಸಂಘಟಿಸಲು ಅಮೆರಿಕ ಟೆನಿಸ್‌ ಸಂಸ್ಥೆ ಹಾಗೂ ಡಬ್ಲ್ಯುಟಿಎ ಭಾರಿ ಪ್ರಯತ್ನ ನಡೆಸಿವೆ. ಟೂರ್ನಿ ಯಶಸ್ವಿಯಾಗಲಿ‘ ಎಂದು ಹಲೆಪ್‌ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು