ಮಂಗಳವಾರ, ಮೇ 26, 2020
27 °C

ಕೊರೊನಾ ವೈರಸ್‌ ಪರಿಣಾಮ: ವಿಂಬಲ್ಡನ್‌ ಚಾಂಪಿಯನ್‌ಷಿಪ್‌ ರದ್ದು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಕೊರೊನಾ ಸೋಂಕು ಪಿಡುಗಿನ ಕಾರಣ ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಟೂರ್ನಿಯನ್ನು ರದ್ದುಮಾಡಲಾಗಿದೆ. ಎರಡನೇ ಮಹಾಯುದ್ಧದ ನಂತರ ಇದೇ ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ ರದ್ದಾಗಿದೆ.

ಕೆಲವು ದಿನಗಳಿಂದ ಭಾಗಿದಾರರ ಜೊತೆ ತುರ್ತು ಸಭೆ ನಡೆಸುತ್ತ ಬಂದಿದ್ದ ಆಲ್‌ ಇಂಗ್ಲೆಂಡ್‌ ಲಾನ್ ಟೆನಿಸ್‌ ಕ್ಲಬ್‌ (ಎಇಎಲ್‌ಟಿಸಿ) ಬುಧವಾರ ಕೊನೆಗೂ ಟೂರ್ನಿಯನ್ನು ರದ್ದು ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ಹುಲ್ಲಿನಂಕಣದ ಮೇಲೆ ನಡೆಯುವ ಈ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಜೂನ್‌ 29 ರಿಂದ ಜುಲೈ 12ರವರೆಗೆ ನಡೆಯಬೇಕಾಗಿತ್ತು.

‘134ನೇ ವರ್ಷದ ಚಾಂಪಿಯನ್‌ಷಿಪ್‌ 2021ರ ಜೂನ್‌ 28 ರಿಂದ ಜುಲೈ 11ರವರೆಗೆ ನಡೆಯಲಿದೆ‘ ಎಂದು ಕ್ಲಬ್‌ ಹೇಳಿಕೆಯಲ್ಲಿ ತಿಳಿಸಿದೆ.

1946ರ ನಂತರ ಈ ಟೂರ್ನಿ ಒಮ್ಮೆಯೂ ರದ್ದಾಗಿರಲಿಲ್ಲ. ಅದಕ್ಕಿಂತ ಹಿಂದೆ ಆರು ವರ್ಷಗಳ ಕಾಲ (1939–45) ಎರಡನೇ ವಿಶ್ವ ಸಮರದ ಕಾರಣ ಟೂರ್ನಿ ರದ್ದಾಗಿತ್ತು.

ಕೊರೊನಾ ಸೋಂಕು ವಿಪರೀತವಾದ ನಂತರ ಕೆಲವು ಪ್ರಮುಖ ಕ್ರೀಡಾಕೂಟಗಳು ರದ್ದಾಗಿದ್ದು, ಈ ಪಟ್ಟಿಗೆ ವಿಂಬಲ್ಡನ್‌ ಕೂಡ ಸೇರ್ಪಡೆಯಾಗಿದೆ. ಯುರೊ 2020 ಫುಟ್‌ಬಾಲ್‌ ಚಾಂಪಿಯನ್‌ಷಿಪ್‌  ಮತ್ತು ಟೋಕಿಯೊ ಒಲಿಂಪಿಕ್ಸ್‌ ಕೂಡ ಕೆಲದಿನಗಳ ಹಿಂದೆ ಮುಂದೂಡಿಕೆಯಾಗಿದ್ದವು.

ವಿಂಬಲ್ಡನ್‌ ಅವಧಿ ಕಡಿಮೆಗೊಳಿಸಲು ಮತ್ತು ಪ್ರೇಕ್ಷಕರಿಲ್ಲದೇ ಟೂರ್ನಿ ನಡೆಸುವುದಕ್ಕೆ ಆಟಗಾರರಿಂದ ವಿರೋಧಗಳು ವ್ಯಕ್ತವಾಗಿದ್ದವು.

ವಿಂಬಲ್ಡನ್‌ಗೆ ಮೊದಲು, ಮೇ ತಿಂಗಳಲ್ಲಿ ನಡೆಯುವ ಫ್ರೆಂಚ್‌ ಓಪನ್‌ ಟೂರ್ನಿ ಈಗಾಗಲೇ  ಮುಂದೂಡಿಕೆಯಾಗಿದೆ. ಪರಿಷ್ಕೃತ ವೇಳಾಪಟ್ಟಿಯತೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್‌ 4ರವರೆಗೆ ಈ ಆವೆಅಂಕಣದ ಟೂರ್ನಿ ಪ್ಯಾರಿಸ್‌ನಲ್ಲಿ ನಡೆಯಲಿದೆ.

ಬ್ರಿಟನ್‌ನಲ್ಲಿ ಕೋವಿಡ್‌–19ಗೆ ಬಲಿಯಾದವರ ಸಂಖ್ಯೆ ಬುಧವಾರ 2,353ಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು