ವಿಂಬಲ್ಡನ್‌ನಲ್ಲಿ ಬೆಟ್ಟಿಂಗ್ ಶಂಕೆ: ತನಿಖೆ

ಲಂಡನ್: ಬೆಟ್ಟಿಂಗ್ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಈ ಬಾರಿಯ ವಿಂಬಲ್ಡನ್ ಟೂರ್ನಿಯ ಎರಡು ಪಂದ್ಯಗಳ ಬಗ್ಗೆ ತನಿಖೆ ನಡೆಸಲು ಅಂತರರಾಷ್ಟ್ರೀಯ ಟೆನಿಸ್ ಸಮಗ್ರತಾ ಏಜೆನ್ಸಿ (ಐಟಿಐಎ) ಮುಂದಾಗಿದೆ.
ವಿಶ್ವದಾದ್ಯಂತ ವೃತ್ತಿಪರ ಟೆನಿಸ್‌ನ ಸಮಗ್ರತೆಯನ್ನು ಕಾಯ್ದುಕೊಳ್ಳುವ ಸಂಸ್ಥೆಯಾದ ಐಟಿಐಎಗೆ ಲಂಡನ್‌ನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯ ಕುರಿತು ಎರಡು ಕಡೆಯಿಂದ ಮಾಹಿತಿಗಳು ಬಂದಿವೆ. ಇದರ ಆಧಾರದಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯ ಮತ್ತು ಪುರುಷರ ಡಬಲ್ಸ್ ವಿಭಾಗದ ಪಂದ್ಯವೊಂದರಲ್ಲಿ ಬೆಟ್ಟಿಂಗ್ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಂಗಲ್ಸ್ ಪಂದ್ಯದ ಎರಡನೇ ಸೆಟ್ ಮುಕ್ತಾಯದ ವೇಳೆ ತಮಗೆ ಬೇಕಾದಂತೆ ಫಲಿತಾಂಶ ಬರುವಂತೆ ಮಾಡಲು ಐದಂಕಿ ಮೊತ್ತದ ಹಣವನ್ನು ನೀಡಲಾಗಿತ್ತು. ಡಬಲ್ಸ್‌ನಲ್ಲಿ ಮೊದಲ ಸೆಟ್ ಮುಕ್ತಾಯದ ನಂತರ ಬೆಟ್ಟಿಂಗ್ ಮಾಡಲಾಗಿತ್ತು ಎಂಬ ಮಾಹಿತಿ ಬಂದಿದೆ. ಇದನ್ನು ಬೇರೆ ಬೇರೆ ಆಯಾಮದಲ್ಲಿ ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.