ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Wimbledon: ಫೈನಲ್‌ಗೆ ಲಗ್ಗೆಯಿಟ್ಟ ಜೊಕೊವಿಚ್‌ಗೆ ದಾಖಲೆ ಸರಿಗಟ್ಟುವ ಅವಕಾಶ

ಅಕ್ಷರ ಗಾತ್ರ

ಲಂಡನ್: ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷ ವಿಭಾಗದ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಕೆನಡಾದ ಡೆನಿಸ್ ಶಪೊವಲೊವ್ ವಿರುದ್ಧ 7-6 (7/3), 7-5, 7-5ರ ನೇರ ಸೆಟ್‌ನಲ್ಲಿ ಗೆಲುವು ದಾಖಲಿಸಿದರು.

ಈ ಮೂಲಕ 30ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಸಾಧನೆ ಮಾಡಿರುವ ಜೊಕೊವಿಚ್, ದಾಖಲೆಯ 20ನೇ ಕಿರೀಟದ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿದ್ದರು.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಆಧುನಿಕ ಟೆನಿಸ್ ಲೋಕದ ದಿಗ್ಗಜರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ತಲಾ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಜೊಕೊವಿಚ್‌ಗೆ ಈ ದಾಖಲೆ ಸರಿಗಟ್ಟುವ ಅವಕಾಶವಿದೆ.

ಒಟ್ಟಾರೆಯಾಗಿ ಆರನೇ ವಿಂಬಲ್ಡನ್ ಕಿರೀಟವನ್ನು ಎದುರು ನೋಡುತ್ತಿದ್ದಾರೆ. ಇವರಿಗೆ ಇಟಲಿಯ ಮೆಟಿಯೊ ಬೆರೆಟಿನಿ ಅವರಿಂದ ಸವಾಲು ಎದುರಾಗಲಿದೆ.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಬೆರೆಟಿನಿ ಅವರು ಪೋಲೆಂಡ್‌ನ ಹುಬರ್ತ್ ಹುರ್ಕಾಜ್ ಎದುರು 6–3, 6–0, 6–7 (3/7), 6–4ರಲ್ಲಿ ಗೆಲುವು ಸಾಧಿಸಿದರು.

ಈ ಮೂಲಕ ಬೆರೆಟಿನಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ಇಟಲಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 45 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಪ್ರಶಸ್ತಿ ಸುತ್ತು ತಲುಪಿದ ಇಟಲಿಯ ಮೊದಲ ಆಟಗಾರ ಎಂಬ ಶ್ರೇಯವೂ ಅವರದಾಯಿತು. 1976ರಲ್ಲಿ ಆ ದೇಶದ ಆ್ಯಡ್ರಿಯಾನೊ ಪನಾಟ್ಟಾ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT