ಮ್ಯಾಡ್ರಿಡ್: ಮಣಿಕಟ್ಟಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳು ತ್ತಿರುವ ಕಾರಣ ಈ ವರ್ಷದ ವಿಂಬಲ್ಡನ್ ಚಾಂಪಿಯನ್ಷಿಪ್ಸ್ನಿಂದ ಹಿಂದೆಸರಿಯು ವುದಾಗಿ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಕಾರ್ಲೋಸ್ ಅಲ್ಕರಾಜ್ ಮಂಗಳವಾರ ಪ್ರಕಟಿಸಿದ್ದಾರೆ.

ಸ್ಪೇನ್ನ ಟೆನಿಸ್ ತಾರೆ ಎರಡು ಬಾರಿ ಹುಲ್ಲಿನಂಕಣದ ಈ ಪ್ರಶಸ್ತಿಯನ್ನುಗೆದ್ದುಕೊಂಡಿದ್ದಾರೆ. ‘ನನ್ನ ಚೇತರಿಕೆ ಉತ್ತಮವಾಗಿದೆ. ಮೊದಲಿಗಿಂತ ಆರಾಮವೆನಿಸುತ್ತಿದೆ. ದುರದೃಷ್ಟವಶಾತ್ ನಾನು ಈಗಲೇ ಕಣಕ್ಕಿಳಿಯುವ ಸ್ಥಿತಿ ಯಲ್ಲಿಲ್ಲ. ಹೀಗಾಗಿ ಕ್ವೀನ್ಸ್ ಕ್ಲಬ್ ಮತ್ತು ವಿಂಬಲ್ಡನ್ನಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು 23 ವರ್ಷ ವಯಸ್ಸಿನ ಆಟಗಾರ ತಿಳಿಸಿದ್ದಾರೆ.

ಬಾರ್ಸಿಲೋನಾ ಓಪನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದ ವೇಳೆ ಅವರಿಗೆ ಮಣಿಕಟ್ಟಿನ ನೋವು ಕಾಣಿಸಿಕೊಂಡಿತ್ತು. ನಂತರ ಅವರು ಮ್ಯಾಡ್ರಿಡ್, ರೋಮ್ ಟೂರ್ನಿಗಳಿಂದ ಹಿಂದೆಸರಿದಿದ್ದರು.ಫ್ರೆಂಚ್ ಓಪನ್ ಟೂರ್ನಿಯಲ್ಲೂ ಆಡದಿರಲು ಅವರು ನಿರ್ಧರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1299456190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.