ಎಟಿಪಿ ವಾಷಿಂಗ್ಟನ್ ಓಪನ್‌ ಟೆನಿಸ್ ಟೂರ್ನಿ: ಆ್ಯಂಡಿ ಮರ್ರೆಗೆ ಗೆಲುವು

7
ಮೂರು ತಾಸುಗಳ ಪಂದ್ಯ

ಎಟಿಪಿ ವಾಷಿಂಗ್ಟನ್ ಓಪನ್‌ ಟೆನಿಸ್ ಟೂರ್ನಿ: ಆ್ಯಂಡಿ ಮರ್ರೆಗೆ ಗೆಲುವು

Published:
Updated:
Deccan Herald

ವಾಷಿಂಗ್ಟನ್‌: ಮೂರು ತಾಸುಗಳ ಭಾರಿ ಪೈಪೋಟಿ ನಂತರ ಬ್ರಿಟನ್‌ನ ಆ್ಯಂಡಿ ಮರ್ರೆ ಇಲ್ಲಿ ನಡೆಯುತ್ತಿರುವ ಎಟಿಪಿ ವಾಷಿಂಗ್ಟನ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದರು. ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವರು ರೊಮೇನಿಯಾದ ಮಾರಿಯಸ್‌ ಕಾಪಿಲ್ ಅವರನ್ನು 6–7 (5/7), 6–3, 7–6 (7/4) ರಿಂದ ಮಣಿಸಿದರು.

ಹಿಂಗಾಲಿನ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಮರ್ರೆ 11 ತಿಂಗಳ ನಂತರ ಮಣ್ಣಿನ ಅಂಗಣಕ್ಕೆ ಇಳಿದಿದ್ದರು. ಅವರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 93ನೇ ಸ್ಥಾನದಲ್ಲಿರುವ ಮಾರಿಯಸ್‌ ಪ್ರಬಲ ಪೈಪೋಟಿ ನೀಡಿದರು. ಮಳೆಯಿಂದಾಗಿ ನಾಲ್ಕು ದಿನಗಳಿಂದ ಮುಂದೂಡಲಾದ ಪಂದ್ಯದಲ್ಲಿ ಉಭಯ ಆಟಗಾರರು ಜಿದ್ದಿಗೆ ಬಿದ್ದು ಆಡಿದರು. ಪಂದ್ಯದ ನಂತರ ಭಾವುಕರಾದ ಮರ್ರೆ ತಲೆ ತಗ್ಗಿಸಿ ಕುಳಿತು ಆನಂದಾಶ್ರು ಸುರಿಸಿದರು.

ಮೊದಲ ಸೆಟ್‌ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಅಮೋಘ ಆಟದ ಮೂಲಕ ಉಭಯ ಆಟಗಾರರು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಟೈ ಬ್ರೇಕರ್‌ನಲ್ಲಿ ಮರ್ರೆ ಶರಣಾದರು. ಆದರೆ ಎರಡನೇ ಸೆಟ್‌ನಲ್ಲಿ ಮರ್ರೆ ಗೆಲುವು ತಮ್ಮದಾಗಿಸಿಕೊಂಡರು. ಮೂರನೇ ಸೆಟ್‌ನಲ್ಲೂ ರೋಮಾಂಚಕ ಆಟ ಕಂಡು ಬಂತು. ಎದುರಾಳಿಯ ಸವಾಲನ್ನು ಮೆಟ್ಟಿ ನಿಂತ ಮರ್ರೆ ಗೆಲುವು ಸಾಧಿಸಿದರು.

ಜ್ವೆರೆವ್‌ಗೆ ಗೆಲುವು: ಮತ್ತೊಂದು ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್‌ 6–3, 7–5ರಿಂದ ಮಿಶಾ ಅವರನ್ನು ಮಣಿಸಿದರು. ನೊಹ್‌ ರುಬಿನ್ ಎದುರು ಜಾನ್‌ ಇಸ್ನೆರ್‌ 6–4, 7–6 (8/6)ರಿಂದ ಸೋಲಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !