ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸೆಮಿಗೆ ಬರ್ಟೆನ್ಸ್‌

Last Updated 24 ಅಕ್ಟೋಬರ್ 2019, 16:11 IST
ಅಕ್ಷರ ಗಾತ್ರ

ಜುಹಯ್‌, ಚೀನಾ: ಅಗ್ರಶ್ರೇಯಾಂಕದ ಆಟಗಾರ್ತಿ ಕಿಕಿ ಬರ್ಟೆನ್ಸ್‌ ಅವರು ಡಬ್ಲ್ಯುಟಿಎ ಎಲೀಟ್‌ ಟ್ರೋಫಿ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ.

ಗುರುವಾರ ನಡೆದ ರೌಂಡ್‌ ರಾಬಿನ್‌ ಲೀಗ್‌ನ ಗುಂಪು ಹಂತದ ಪಂದ್ಯದಲ್ಲಿ ಬರ್ಟೆನ್ಸ್‌ 6–4, 6–3 ನೇರ ಸೆಟ್‌ಗಳಿಂದ ಉಕ್ರೇನ್‌ನ ಡಯಾನಾ ಯಸ್ಟ್ರೆಮ್‌ಸ್ಕಾ ಎದುರು ಗೆದ್ದರು.

19 ವರ್ಷದ ಡಯಾನಾ, ಮೊದಲ ಸೆಟ್‌ನಲ್ಲಿ ಪರಿಣಾಮಕಾರಿ ಸರ್ವ್‌ಗಳನ್ನು ಮಾಡಲು ವಿಫಲರಾದರು. ಮೂರು ಗೇಮ್‌ಗಳಲ್ಲಿ ನಾಲ್ಕು ಡಬಲ್‌ ಫಾಲ್ಟ್‌ಗಳನ್ನು ಎಸಗಿದರು. ಹೀಗಾಗಿ ನೆದರ್ಲೆಂಡ್ಸ್‌ನ ಬರ್ಟೆನ್ಸ್‌ ಅವರ ಜಯದ ಹಾದಿ ಸುಗಮವಾಯಿತು.

ಎರಡನೇ ಸೆಟ್‌ನಲ್ಲೂ ಕಿಕಿ ಮಿಂಚಿದರು. ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ನಿರಾಯಾಸವಾಗಿ ಗೆದ್ದರು.

ಇದಕ್ಕೂ ಮೊದಲು ನಡೆದಿದ್ದ ಗುಂಪು ಹಂತದ ಪಂದ್ಯಗಳಲ್ಲಿ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಚೊವಾ 2–6, 6–2, 7–5ರಲ್ಲಿ ಅಮೆರಿಕದ ಅಲಿಸನ್‌ ರಿಸ್ಕೆ ಎದುರೂ, ಅಮೆರಿಕದ ಮ್ಯಾಡಿಸನ್‌ ಕೀಸ್‌ 6–3, 6–4ರಲ್ಲಿ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್‌ ಮೇಲೂ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT