ರೋಮ್: ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಯಾನಿಕ್ ಸಿನ್ನರ್ ಅವರು ಭಾನುವಾರ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಕ್ಯಾಸ್ಪರ್ ರೂಡ್ ಅವರನ್ನು ಮಣಿಸಿ, ದಾಖಲೆಯ ಸತತ ಆರನೇ ‘ಮಾಸ್ಟರ್ಸ್ 1000’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಫೈನಲ್ ಹಣಾಹಣಿಯಲ್ಲಿ ಸಿನ್ನರ್ 6-4, 6-4 ಸೆಟ್ಗಳಿಂದ ನಾರ್ವೆಯ ರೂಡ್ ಅವರನ್ನು ಮಣಿಸಿದರು. ಆ ಹಾದಿ ಯಲ್ಲಿ ‘ಮಾಸ್ಟರ್ಸ್ 1000’ ಟೂರ್ನಿಗಳಲ್ಲಿ ಸತತ 34 ಗೆಲುವು ದಾಖಲಿಸಿದ ದಾಖಲೆಯನ್ನು ಉತ್ತಮ ಪಡಿಸಿದರು.

ಆ್ಯಡ್ರಿಯಾನೊ ಪನಾಟ್ಟಾ ನಂತರ ಈ ಕಿರೀಟ ಗೆದ್ದ ಇಟಲಿಯ ಮೊದಲ ಆಟಗಾರ ಎಂಬ ಹಿರಿಮೆಗೂ ಸಿನ್ನರ್ ಪಾತ್ರರಾದರು. 50 ವರ್ಷಗಳ ಹಿಂದೆ ಆ್ಯಡ್ರಿಯಾನೊ ಪ್ರಶಸ್ತಿ ಗೆದ್ದಿದ್ದರು. 24 ವರ್ಷದ ಸಿನ್ನರ್, ಎಟಿಪಿಯ ಎಲ್ಲಾ ಉನ್ನತ ರ್ಯಾಂಕ್ನ ಟೂರ್ನಿಗಳನ್ನು ಗೆದ್ದು ‘ಗೋಲ್ಡನ್ ಮಾಸ್ಟರ್ಸ್’ ಅನ್ನು ಪೂರ್ಣಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-4-582710135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.