ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸಿಂಗಲ್ಸ್ ಮಾದರಿಗೆ ಯೂಕಿ ವಿದಾಯ

ಗ್ರ್ಯಾನ್‌ಸ್ಲಾಮ್ ಡಬಲ್ಸ್ ವಿಭಾಗದಲ್ಲಿ ಯಶಸ್ಸು ಸಾಧಿಸುವ ಚಿತ್ತ
Last Updated 4 ಜನವರಿ 2023, 14:03 IST
ಅಕ್ಷರ ಗಾತ್ರ

ಪುಣೆ: ಭಾರತದ ಟೆನಿಸ್ ಆಟಗಾರ ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ಮಾದರಿಗೆ ವಿದಾಯ ಹೇಳಿದ್ದಾರೆ.

ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಡಬಲ್ಸ್‌ ವಿಭಾಗದಲ್ಲಿ ಯಶಸ್ಸಿ ಸಾಧಿಸುವತ್ತ ಚಿತ್ತ ನೆಟ್ಟು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಾನಿಯಾ ಮಿರ್ಜಾ ಅವರ ಬಳಿಕ ಸಿಂಗಲ್ಸ್ ವಿಭಾಗ ತ್ಯಜಿಸುತ್ತಿರುವ ಭಾರತದ ಪ್ರಮುಖ ಟೆನಿಸ್‌ ಪಟು ಅವರಾಗಿದ್ದಾರೆ.

ದೀರ್ಘಕಾಲ ಕಾಡಿದ ಮೊಣಕಾಲು ನೋವು ಕೂಡ 28 ವರ್ಷದ ಯೂಕಿ ಅವರು ಸಿಂಗಲ್ಸ್ ವಿಭಾಗ ತೊರೆಯಲು ಕಾರಣವಾಗಿದೆ.

‘ಸಿಂಗಲ್ಸ್ ವಿಭಾಗದಲ್ಲಿ ನನಗೆ ತಿಳಿದಿರುವಂತೆ ಶ್ರೇಷ್ಠ ನಿರ್ವಹಣೆ ತೋರಿದ್ದೇನೆ. ಆ ಕುರಿತು ಸಂತೃಪ್ತಿ ಇದೆ. ಏನಾದರೂ ತಪ್ಪಾಗಿರಬಹುದು ಅಥವಾ ದುರದೃಷ್ಟ ಇರಬಹುದು ನನಗೆ ಗೊತ್ತಿಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿತ್ತೆಂಬ ಪಶ್ಚಾತ್ತಾಪವೂ ಇಲ್ಲ. ಈ ನಿರ್ಧಾರದ ಹಿಂದೆ ಗಾಯದ ಪಾತ್ರವೂ ಪ್ರಮುಖವಾಗಿದೆ‘ ಎಂದು ಭಾಂಭ್ರಿ ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

‘ನಾನು ಸಿಂಗಲ್ಸ್ ವಿಭಾಗ ತೊರೆದು, ಡಬಲ್ಸ್ ಸ್ಪರ್ಧೆಗಳಲ್ಲಿ ಮುಂದುವರಿಯಲು 2019ರಲ್ಲೇ ನಿರ್ಧರಿಸಿದ್ದೆ. ಸಿಂಗಲ್ಸ್ ಪಂದ್ಯಗಳನ್ನು ಆಡಲು ಸಾಧ್ಯವಾಗುವ ಹಂತದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕೆಂದಿದ್ದೆ. ಗಾಯಗೊಂಡ ಕಾರಣ ಪ್ರಮುಖ ಮೂರು ವರ್ಷಗಳ ಕಾಲ ದೂರ ಉಳಿದೆ. 2021ರಲ್ಲಿ ಆಟಕ್ಕೆ ಮರಳಿದೆ. ಅಮೆರಿಕಕ್ಕೆ ತೆರಳಿದೆ; ಕೊರೊನಾ ಸೋಂಕಿತನಾಗಿ ನರಳಿದೆ‘ ಎಂದು ಅವರು ವಿವರಿಸಿದರು.

ಯೂಕಿ ಅವರು ಸಿಂಗಲ್ಸ್ ವಿಭಾಗದಲ್ಲಿ 2015, 2016 ಮತ್ತು 2018ರ ಆಸ್ಟ್ರೇಲಿಯಾ ಓಪನ್‌ ಮೊದಲ ಸುತ್ತಿನಲ್ಲಿ ಆಡಿದ್ದಾರೆ. 2018ರಲ್ಲಿ ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಮತ್ತು ಅಮೆರಿಕ ಓಪನ್ ಟೂರ್ನಿಗಳ ಮೊದಲ ಸುತ್ತಿನ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು.

ಸಿಂಗಲ್ಸ್ ವಿಭಾಗದಲ್ಲಿ 2018ರ ಏಪ್ರಿಲ್‌ನಲ್ಲಿ ಜೀವನಶ್ರೇಷ್ಠ 83ನೇ ರ‍್ಯಾಂಕಿಂಗ್‌ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT